ನಾಟಕ ಅಕಾಡಮಿ ಪ್ರಶಸ್ತಿ ಘೋಷಣೆ : ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
ಮುಖ್ಯಮಂತ್ರಿ ಚಂದ್ರು
ಬೆಂಗಳೂರು : ಕರ್ನಾಟಕ ನಾಟಕ ಅಕಾಡಮಿಯ 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಡಾ.ಮುಖ್ಯಮಂತ್ರಿ ಚಂದ್ರು ಆಯ್ಕೆಯಾಗಿದ್ದಾರೆ ಎಂದು ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾರ್ಷಿಕ ಪ್ರಶಸ್ತಿಗೆ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ ರಮೇಶ ತಿಪ್ಪಣ್ಣ ಚಿತ್ರಗಾರ, ಶಿವಾನಂದ ತಗಡೂರು, ಆರ್.ರಾಮಕೃಷ್ಣ (ಚನ್ನಯ್ಯ), ಅನುಸೂಯ ರೇವಣಸಿದ್ದಯ್ಯ, ಅಯ್ಯಣ್ಣ ಸ್ವಾಮಿ ಹಿರೇಮಠ, ಫಣಿಯಮ್ಮ ಎಚ್.ಎಸ್., ಮಲ್ಲಪ್ಪ ಭರಮಪ್ಪ ಕುರಿ, ಕೆ.ಪಿ.ಸ್ವಾಮಿ, ಸುಶೀಲಾ ಹೆಗಡೆ ಮೂರೂರು, ರಾಜಕುಮಾರ್ ಎಸ್., ಡಾ.ಎಂ.ಗಣೇಶ್ ಹೆಗ್ಗೋಡು, ಪ್ರದೀಪ್ ಚಂದ್ರ ಕುತ್ಪಾಡಿ, ಎನ್.ಟಿ.ಕೃಷ್ಣಪ್ಪ, ಪುರುಷೋತ್ತಮ ಹಂದ್ಯಾಳ್, ಡಾ.ಎಸ್.ವಿ.ಸುಷ್ಮಾ, ನಂದ ಹಳೆಮನೆ, ಶ್ರೀನಿವಾಸ್, ವೈ.ಎನ್.ಉಮಾ, ಗದಿಗೆಯ್ಯಾ ವಿ.ಹೆರೇಮಠ, ಟಿ.ಭಾರತಿ, ಬಿ.ಸಾವಿತ್ರಮ್ಮ, ಎಂ.ಸಿ.ಶಿವರುದ್ರಪ್ಪ, ವೇಣುಗೋಪಾಲ್.ಕೆ, ಎನ್.ಎಂ.ಲಕ್ಷ್ಮಯ್ಯ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಜೀವಮಾನ ಸಾಧನೆ ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ರೂ. ನಗದು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನಗದು, ವಿವಿಧ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ತಲಾ 15 ಸಾವಿರ ರೂ. ನಗದು ಫಲಕ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾಟಕ ಅಕಾಡಮಿಯ ರಿಜಿಸ್ಟ್ರಾರ್ ಬಿ.ನೀಲಮ್ಮ ಹಾಜರಿದ್ದರು.
ವಿವಿಧ ದತ್ತಿ ಪುರಸ್ಕಾರಗಳು :
ಎಚ್.ವಿ.ವೆಂಕಟಸುಬ್ಬಯ್ಯ ದತ್ತಿಗೆ ಬಿ.ಜಿ.ಶ್ರೀಧರ, ಬಿ.ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರಕ್ಕೆ ಅಶ್ವಾಕ ಹುಸೇನ ಹಾ. ಜಾಗೀರದಾರ, ಕೆ.ರಾಮಚಂದ್ರಯ್ಯ ದತ್ತಿ ಪ್ರಶಸ್ತಿಗೆ ಡಾ.ಎಂ. ಚಂದ್ರಪ್ಪ, ಮಾಲತಿಶ್ರೀ ಮೈಸೂರು ದತ್ತಿಗೆ ದಯಾನಂದ ಚ.ಬೀಳಗಿ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ಗಂಗಾಧರ ರೆಡ್ಡಿ ವಿ.ಆರ್, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿಗೆ ವೈ.ಎನ್.ಶಿವಣ್ಣ, ಕೆ. ಹಿರಣ್ಣಯ್ಯ ದತ್ತಿಗೆ ಚಂದ್ರಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಅಕಾಡಮಿಯ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಮಾಹಿತಿ ನೀಡಿದ್ದಾರೆ.