×
Ad

ಪ್ರಧಾನಿ ಮೋದಿ ಕನ್ನಡಿಗರಿಗೆ ಕೊಟ್ಟ ಕೊಡುಗೆ ಚೊಂಬು, ಟೋಪಿ : ಸಚಿವ ಪ್ರಿಯಾಂಕ್ ಖರ್ಗೆ

Update: 2024-05-03 21:27 IST

ಬೆಂಗಳೂರು: ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಜನರ ಕೈಗೆ ಚೊಂಬು, ತಲೆಗೆ ಮಕ್ಮಲ್ ಟೋಪಿ! ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬರ ಪರಿಹಾರಕ್ಕಾಗಿ ರಾಜ್ಯ ಸರಕಾರದ ಕಾನೂನು ಹೋರಾಟದ ನಂತರವೂ ಕೇಂದ್ರ ಸರಕಾರ ತನ್ನ ಮಲತಾಯಿ ಧೋರಣೆಯನ್ನೆ ಮುಂದುವರೆಸಿದೆ ಎಂದು ಕಿಡಿಕಾರಿದ್ದಾರೆ.

ನ್ಯಾಯಯುತವಾಗಿ 18,172 ಕೋಟಿ ರೂ. ಪರಿಹಾರ ಕೊಡದೆ ಬಿಡಿಗಾಸನ್ನು ಕೊಟ್ಟು ಇನ್ನುಳಿದ 14,718 ಕೋಟಿ ರೂ. ಅನ್ನು ವಂಚಿಸಿದೆ. ಮೋದಿಯ ಮೋಸಕ್ಕೆ ಕನ್ನಡಿಗರ ಪ್ರತೀಕಾರ ಈ ಚುನಾವಣೆಯಲ್ಲಿ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News