×
Ad

ಬೆಂಗಳೂರು | ಎಫ್‌ಐಆರ್ ದಾಖಲಾದ ‘ಈಡಿ’ ಅಧಿಕಾರಿಗಳನ್ನು ಬಂಧಿಸಲು ಕಾಂಗ್ರೆಸ್ ಒತ್ತಾಯ

Update: 2024-07-23 22:44 IST

ಬೆಂಗಳೂರು: ಈಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಕೂಡಲೇ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ನಿಯೋಗ ಹಲಸೂರು ಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.

ನಿಯೋಗದ ನೇತೃತ್ವ ವಹಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿ, ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಈಡಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಹೆಸರನ್ನು ಹಗರಣದಲ್ಲಿ ಸಿಲುಕಿಸಲು ತನಿಖೆಯಲ್ಲಿ ಹಾಜರಾಗಿರುವ ಅಧಿಕಾರಿಗಳ ಮೇಲೆ ಒತ್ತಡ ಹೇರಿರುವ ಈಡಿ ಅಧಿಕಾರಿಗಳನ್ನು ಬಂಧಿಸಬೇಕು ಮತ್ತು ತನಿಖೆ ನಡೆಸಿ ಸತ್ಯಾಂಶವನ್ನ ತಿಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರುಗಳಾದ ಸುಧಾಕರ್ ರಾವ್, ಪರಿಸರ ರಾಮಕೃಷ್ಣ, ಹೇಮರಾಜ್, ಚೇತನ್, ಚಂದ್ರಶೇಖರ್, ಓಬಳೇಶ್ ಚಿನ್ನಿ ಪ್ರಕಾಶ್, ಪುಟ್ಟರಾಜು, ನವೀನ್ ಸಾಯಿ, ವಾಸು ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News