ಚಲನಚಿತ್ರ ಅಕಾಡಮಿಗೆ ಏಳು ಮಂದಿ ಸದಸ್ಯರ ನೇಮಕ
Update: 2025-02-15 18:56 IST
ಬೆಂಗಳೂರು : ಹಿರಿಯ ಪತ್ರಕರ್ತರಾದ ಸಾವಿತ್ರಿ ಮಜುಂದಾರ್, ಚಿದಾನಂದ ಪಾಟೀಲ್ ಸೇರಿದಂತೆ ಏಳು ಮಂದಿಯನ್ನು ಕರ್ನಾಟಕ ಚಲನಚಿತ್ರ ಅಕಾಡಮಿಗೆ ಸದಸ್ಯರನ್ನು ನೇಮಿಸಿ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ಸಿನೆಮಾ ವಿಶ್ಲೇಷಕ ದೇಶಾದ್ರಿ ಎಚ್., ಸಿನಿಮಾ ಕಲಾವಿದರಾದ ನಿಖಿತಾಸ್ವಾಮಿ ಎಸ್., ಸಿನಿಮಾ ಪ್ರಚಾರಕ ಡಿ.ಜಿ.ವೆಂಕಟೇಶ್, ಚಿತ್ರೋದ್ಯಮಿ ವಿಷ್ಣು ಕುಮಾರ್.ಎಸ್., ಸಿನೆಮಾ ತಂತ್ರಜ್ಞ ಐವಾನ್ ಡಿ.ಸಿಲ್ವ ಅವರು ಚಲನಚಿತ್ರ ಅಕಾಡಮಿಯ ನೂತನ ಸದಸ್ಯರಾಗಿ ನೇಮಕವಾಗಿದ್ದಾರೆ. ಎಪ್ರಿಲ್‍ನಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಸರಕಾರ ನೇಮಕ ಮಾಡಿತ್ತು.