×
Ad

ಜರ್ಮನಿಯ ಮುವೈಥಾಯ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಬೆಂಗಳೂರಿನ ಯುವಕರು

Update: 2025-04-22 16:49 IST

ಬೆಂಗಳೂರು : ಜರ್ಮನಿಯ ಕಲೋನ್‌ನಲ್ಲಿ ಎ.10 ರಿಂದ 13ರವರೆಗೆ ನಡೆದ ಮುವೈಥಾಯ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದು ದೇಶದ ಕೀರ್ತಿಪತಾಕೆಯನ್ನುಹಾರಿಸಿದ್ದಾರೆ.

ಬೆಂಗಳೂರಿನ ಮಹದೇವಪುರ ವಿಧಾನ ಸಭಾ ಕ್ಷೇತ್ರದ ರಾಮಗೊಂಡನಹಳ್ಳಿಯಲ್ಲಿ ಎಕೆಎಫ್ ಸಿ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದ ರಮೇಶ್ ಜಯಂತ್ ಕುಮಾರ್ 65.5 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಇಲೆಸನಕುಲ ಅನ್ವೇಶ್ 60 ಕೆಜಿ ವಿಭಾಗದಲ್ಲಿ ಹಾಗೂ ಹರೀಶ್ ಅಶೋಕ್ 54 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎಂಟಿಐ ಅಧ್ಯಕ್ಷ ಗ್ರಾಂಡ್ ಮಾಸ್ಟರ್ ಎಂ.ಎಚ್.ಆಬಿದ್ ಮತ್ತು ರಾಷ್ಟ್ರೀಯ ತರಬೇತುದಾರ ಗ್ರಾಂಡ್ ಮಾಸ್ಟರ್ ಎನ್.ಕುಮಾರ್ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಭಾರತೀಯ ತಂಡವು ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಪರಿಣಾಮ ಬೀರಿದೆ. ಈ ಕ್ರೀಡಾಕೂಟದಲ್ಲಿ ಸುಮಾರು 20 ದೇಶಗಳ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ತರಬೇತುದಾರ ಗ್ರಾಂಡ್ ಮಾಸ್ಟರ್ ಎನ್.ಕುಮಾರ್ ಮಾತನಾಡಿ, ಭಾರತೀಯ ಕ್ರೀಡಾಪಟುಗಳು ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಎಐಎಂ-ಎಕೆಎಫ್‌ಸಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ ದೇಶವನ್ನು ಪ್ರತಿನಿಧಿಸಿ ಮತ್ತಷ್ಟು ಪದಕಗಳನ್ನು ತರುವ ಪ್ರಯತ್ನ ನಡೆಸಲಿದ್ದೇವೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News