×
Ad

ಕೈಗಾರಿಕೆ ಉದ್ದೇಶಕ್ಕೆ ಭೂಮಿ ನೀಡುವ ರೈತರಿಗೆ ಸರಕಾರ ಬೆಂಬಲ ನೀಡಲು ಮನವಿ

Update: 2025-07-10 18:47 IST

ಬೆಂಗಳೂರು : ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ನಿರ್ಮಾಣವಾಗುವ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‍ಗೆ ಭೂಮಿ ನೀಡಲು ಸಿದ್ದರಿರುವ ರೈತರಿಗೆ ಸರಕಾರ ಮಾರುಕಟ್ಟೆ ದರವನ್ನು ನೀಡಿ ನ್ಯಾಯ ದೊರಕಿಸಿಕೊಡಬೇಕು ಎಂದು ದೇವನಹಳ್ಳಿ ಚನ್ನರಾಯಪಟ್ಟಣ ರೈತ ಸಮಿತಿ ಮನವಿ ಮಾಡಿದೆ.

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಕೆಐಎಡಿಬಿ ನಿರ್ಮಾಣ ಮಾಡುತ್ತಿರುವ ಕೈಗಾರಿಕೆಯಲ್ಲಿ ನಮ್ಮ ಮಕ್ಕಳಿಗೆ ಓದಿಗೆ ತಕ್ಕಂತೆ ಮನೆಗೊಂದು ಉದ್ಯೋಗ ಕೊಡಬೇಕು. ಇದೀಗ ಸರಕಾರ ಚನ್ನರಾಯಪಟ್ಟಣದ 1,777 ಎಕರೆ ಭೂಮಿಯನ್ನು ವಿಶೇಷ ಕೃಷಿ ವಲಯ ಎಂದು ಘೋಷಣೆ ಮಾಡಿದರೆ, ಮುಂದಿನ ದಿನಗಳಲ್ಲಿ ರೈತರು ಆ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯ ಚನ್ನಕೇಶವ ಮಾತನಾಡಿ, ನಿಜವಾದ ರೈತ ಯಾರು ಎಂಬುದನ್ನು ಆರ್‌ಟಿಸಿಯನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಕೆಐಎಡಿಬಿಗೆ ಜಮೀನು ಬಿಟ್ಟು ಕೊಡಲು ಸಿದ್ದರಿದ್ದೇವೆ. ಸರಕಾರಕ್ಕೆ ಭೂಮಿ ಕೊಡಲು ಯಾವುದೇ ಆಕ್ಷೇಪಣೆ ಇಲ್ಲ. ನಮ್ಮ ಮಕ್ಕಳಿಗೆ ಉದ್ಯೋಗ ಬೇಕಾಗಿದೆ. ವಿಶೇಷ ಆರ್ಥಿಕ ವಲಯ (ಎಸ್‍ಇಝಡ್) ಮಾಡಿದ್ದಲ್ಲಿ ನಮಗೆ ವ್ಯವಸಾಯ ಮಾಡಲು ನೀರಿನ ಕೊರತೆ ಇದೆ. ಆದರೆ, ಭೂಮಿ ಕೊಡುವುದಿಲ್ಲ ಎಂದು ಧರಣಿ ನಡೆಸುತ್ತಿರುವವರು ನಿಜವಾದ ರೈತರಲ್ಲ. ಅವರೆಲ್ಲ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಮಾಫಿಯಾ ಕುಮ್ಮಕ್ಕಿನಿಂದ ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಶ್ರೀನಿವಾಸ್, ದೊಡ್ಡೇಗೌಡ, ರಂಗಣ್ಣ, ಜಗದೀಶ್, ಭರತ್, ದೇವರಾಜ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News