ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪೋಸ್ಟರ್ ಅಭಿಯಾನ
ಬೆಂಗಳೂರು : ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನು ಬಳಸಿಕೊಂಡು ಅಮೆರಿಕದ ಅಧ್ಯಕ್ಷ ‘ಡೊನಾಲ್ಡ್ ಟ್ರಂಪ್'ರನ್ನು ಭೇಟಿ ಮಾಡುವ ಮೂಲಕ ದೇಶದ ಘನತೆಗೆ ಧಕ್ಕೆ ತಂದಿರುವುದನ್ನು ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ.
ದೇಶದ ಪ್ರಧಾನಮಂತ್ರಿ ಮೋದಿಯವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ದೇಶದ ಬಗ್ಗೆ ಗೌಪ್ಯ ಮಾಹಿತಿ ಇದೆ. ಎಂಬುವ ವಿಷಯವನ್ನು ತಿಳಿಸುವ ಸುಳ್ಳು ಪ್ರಯತ್ನ ನಡೆಸಿ ದೇಶಕ್ಕೆ ಹಾಗೂ ರಾಜ್ಯದ ಜನತೆಗೆ ವಿಶೇಷವಾಗಿ ಬೆಂಗಳೂರು ನಗರದ ಜನತೆ ತಲೆತಗ್ಗಿಸುವಂತೆ ಮಾಡಿದ್ದಾರೆ. ಕೂಡಲೇ ತೇಜಸ್ವಿ ಸೂರ್ಯ ವಿರುದ್ಧ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಕೇಂದ್ರ ಸರಕಾರ ತನಿಖೆ ನಡೆಸಬೇಕು. ಕೂಡಲೇ ಸಂಸತ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಸಲೀಂ, ಕುಶಾಲ್ ಅರುವೆಗೌಡ, ಆನಂದ್ ಕುಮಾರ್ ಎಂಎಸ್, ಪುಟ್ಟರಾಜು, ಸಂಜಯ್, ಓಬಳೇಶ್, ನವೀನ್, ಚಿನ್ನಿಪ್ರಕಾಶ್, ನವೀನ್ ಸುಂಕದಕಟ್ಟೆ ಮತ್ತಿತರರು ಹಾಜರಿದ್ದರು.