ಆನ್‍ಲೈನ್ ಬೆಟ್ಟಿಂಗ್ ನಿಷೇಧಿಸಲು ಆಗ್ರಹಿಸಿ ಕೆಆರ್‌ಎಸ್ ಧರಣಿ
ಬೆಂಗಳೂರು : ಕರ್ನಾಟಕದಲ್ಲಿ ಆನ್ಲೈನ್ ಬೆಟ್ಟಿಂಗ್ ಹಾಗೂ ಜೂಜಾಟಗಳಿಂದ ಯುವಜನರ ಜೀವನ ಹಾಳಾಗುತ್ತಿದ್ದು, ಕೂಡಲೇ ಆನ್‍ಲೈನ್ ಬೆಟ್ಟಿಂಗ್ ಅನ್ನು ನಿಷೇದಿಸುವಂತೆ ಆಗ್ರಹಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಕೆಆರ್‌ಎಸ್ ಯುವ ಘಟಕದ ರಾಜ್ಯಾಧ್ಯಕ್ಷೆ ಜನನಿ ವತ್ಸಲಾ ಮಾತನಾಡಿ, ಇತ್ತೀಚಿಗೆ ಕರ್ನಾಟಕ ಸರಕಾರವು ಆನ್‍ಲೈನ್ ಬೆಟ್ಟಿಂಗ್ ನಿಷೇಧಿಸಲು ಕಾಯ್ದೆ ಜಾರಿಗೆ ತರುವುದಾಗಿ ಹೇಳಿದೆ, ಆದರೆ. ಇದರಲ್ಲಿ ಕೌಶಲ್ಯದ ಆಟಗಳಿಗೆ ಅವಕಾಶ ನೀಡುವುದಾಗಿ ತಿಳಿಸಲಾಗಿದೆ. ರಾಜ್ಯ ಸರಕಾರವು ಮಾಡುವ ಇಂತಹ ಕಾಯ್ದೆ. ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಕೌಶಲ್ಯದ ಆಟ ಎಂಬ ಹೆಸರಿನಲ್ಲಿ ಎಂದಿನಂತೆ ಆನ್‍ಲೈನ್ ಜೂಜಾಟ ಹಿಂಬಾಗಿಲಿನ ಮೂಲಕ ಮುಂದುವರಿಯಲಿದೆ. ಆದ್ದರಿಂದ ರಾಜ್ಯದಲ್ಲಿ ಎಲ್ಲಾ ರೀತಿಯ ಹಣದ ವಹಿವಾಟಿನ ಮೂಲಕ ನಡೆಯುವ ಆನ್‍ಲೈನ್ ಆಟಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಕೆಆರ್‌ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್, ಉಪಾಧ್ಯಕ್ಷರು ರಘು ಜಾಣಗೆರೆ, ರಾಜ್ಯ ಪ್ರದಾನ ಕಾರ್ಯದರ್ಶಿ ದೀಪಕ್.ಸಿ.ಎನ್, ರಘುನಂದನ, ರಮೇಶ್ ಗೌಡ, ಆನಂದ್, ಮೋಹನ್ ಕುಮಾರ್, ಧನಂಜಯ, ರಾಮಸ್ವಾಮಿ, ಸುರೇಶ್, ಅಮಿತ್, ಮುಹಮ್ಮದ್ ಆಶಾಮ್, ಅನುಸ್ವಾಮಿ, ನಿರ್ಮಲ, ಪುಷ್ಪ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.