ಬೆಂಗಳೂರು | ಅಪಾರ್ಟೆಂಟ್ ಗೋಡೆಯ ಮೇಲೆ ದೇಶ ವಿರೋಧಿ ಬರಹ ಪತ್ತೆ!
Update: 2025-07-31 00:50 IST
ಬೆಂಗಳೂರು : ಇಲ್ಲಿನ ಕೊಡಿಗೇಹಳ್ಳಿಯಲ್ಲಿರುವ ಅಪಾರ್ಟ್ಮೆಂಟೊಂದರ ಗೋಡೆಯ ಮೇಲೆ "ನಾನು ಭಾರತವನ್ನು ಸ್ಫೋಟಿಸುತ್ತೇನೆ' ಎಂಬ ದೇಶ ವಿರೋಧಿ ಬರಹ ಕಂಡು ಬಂದಿರುವುದಾಗಿ ವರದಿಯಾಗಿದೆ.
ಇದನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಯಾರು ಬರೆದಿದ್ದಾರೆಂಬುದು ಇದುವರೆಗೂ ತಿಳಿದುಬಂದಿಲ್ಲ. ಇನ್ನು ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಠಾಣೆಯ ಪೊಲೀಸರು, ಪರಿಶೀಲನೆ ಕೈಗೊಂಡು ಆರೋಪಿಗಾಗಿ ಹುಡುಕಾಟ ನಡೆಸಿರುವುದಾಗಿ ತಿಳಿಸಿದ್ದಾರೆ.