×
Ad

ಮತಗಳ್ಳತನದ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ : ಕೆ.ಸಿ.ವೇಣುಗೋಪಾಲ್

Update: 2025-08-01 00:10 IST

 ಕೆ.ಸಿ. ವೇಣುಗೋಪಾಲ್ | PC : PTI 

ಬೆಂಗಳೂರು: "ಆಗಸ್ಟ್‌ 5 ರಂದು ಮತಗಳ್ಳತನದ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಮಾಧ್ಯಮಗಳಿಗೆ ಗುರುವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.

"ಕರ್ನಾಟಕ ಚುನಾವಣಾ ಆಯೋಗದ ವಿರುದ್ದ ದೊಡ್ಡ ಹೋರಾಟ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಇದರ ವಿರುದ್ದ ದೊಡ್ಡ ಹೋರಾಟ ನಡೆಯಲಿದೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News