ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿದ್ದ ಸೂರ್ಯನಗರ, ಸರ್ಜಾಪುರ, ಜಿಗಣಿ, ಅತ್ತಿಬೆಲೆ, ಅನೇಕಲ್ ಹಾಗೂ ಬನ್ನೇರುಘಟ್ಟ ಪೊಲೀಸ್ ಠಾಣೆಗಳನ್ನು ಬೆಂಗಳೂರು ದಕ್ಷಿಣ ಪೊಲೀಸ್ ಕಮಿಷನರೇಟ್‍ಗೆ ಸೇರ್ಪಡೆಗೊಳಿಸಿ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಕಾನ್‍ಸ್ಟೇಬಲ್ ಹಾಗೂ ಎಎಸ್‍ಐ ಹುದ್ದೆಗಳನ್ನು ಸರಿದೂಗಿಸಲು ನಗರ ಜಿಲ್ಲಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೇವಾ ಜೇಷ್ಠತೆಯೊಂದಿಗೆ ಬೆಂಗಳೂರು ನಗರ ಘಟಕಕ್ಕೆ ವರ್ಗಾವಣೆ ಹೊಂದುವ ಕುರಿತು ಅಭಿಪ್ರಾಯ ಪಡೆದು ಪರಿಶೀಲಿಸಿ ಪ್ರಸ್ತಾವವನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ಮೂಲಕ ಸಲ್ಲಿಸಬೇಕು. ಅದೇ ರೀತಿ ಪಿಎಸ್‍ಐ ಹುದ್ದೆಗಳನ್ನು ಸರಿದೂಗಿಸಲು ಪರಿಶೀಲಿಸಿ ವರ್ಗಾವಣೆ ಹೊಂದುವ ಬಗ್ಗೆ ಕೇಂದ್ರ ವಲಯದ ಐಜಿಪಿ ಪ್ರಸ್ತಾವವನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ನೂತನವಾಗಿ ಸೇರ್ಪಡೆಗೊಂಡಿರುವ ಈ ಆರು ಠಾಣೆಗಳ ಮೂಲಸೌಕರ್ಯಗಳನ್ನು ಯಥಾಸ್ಥಿತಿಯಲ್ಲಿ ಹಸ್ತಾಂತರಿಸಿ ಪಾಲನಾ ವರದಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಬೇಕು ಆದೇಶದಲ್ಲಿ ಸಲೀಂ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅನಿಲ್/ವಾರ್ತಾಭಾರತಿ

ಬೆಂಗಳೂರು ವರದಿಗಾರರು