ಭಾರತದ ಡಿಜಿಟಲ್ ಆಡಳಿತ ಪ್ಲಾಟ್‌ಫಾರ್ಮ್ ʼಪ್ರಗತಿʼ ಕುರಿತ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ಬಿಡುಗಡೆ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತದ ʼಪ್ರಗತಿʼ ಡಿಜಿಟಲ್ ಪ್ಲಾಟ್‌ಫಾರ್ಮ್ ದೇಶಾದ್ಯಂತ ಬೃಹತ್ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ವಿಶ್ಲೇಷಿಸುವ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೈದ್ ಬ್ಯುಸಿನೆಸ್ ಸ್ಕೂಲ್ ನ ಅಧ್ಯಯನ ವರದಿಯನ್ನು ಇಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ನಲ್ಲಿ ಬಿಡುಗಡೆ ಮಾಡಲಾಯಿತು.
"ಗ್ರಿಡ್‌ಲಾಕ್ ನಿಂದ ಬೆಳವಣಿಗೆಯವರೆಗೆ: ನಾಯಕತ್ವವು ಭಾರತದ ಪ್ರಗತಿ ಪೂರಕ ವ್ಯವಸ್ಥೆಯನ್ನು ಶಕ್ತಿಯುತ ಬೆಳವಣಿಗೆಗೆ ಹೇಗೆ ಸಕ್ರಿಯಗೊಳಿಸುತ್ತಿದೆ" ಎಂಬುದನ್ನು ಅಧ್ಯಯನ ವರದಿಯು ವಿಶ್ಲೇಷಿಸುತ್ತದೆ.
2015 ರಲ್ಲಿ ಪ್ರಾರಂಭವಾದಾಗಿನಿಂದ 17.05 ಲಕ್ಷ ಕೋಟಿ ರೂ. ($205 ಶತಕೋಟಿ) ಮೌಲ್ಯದ 340 ಯೋಜನೆಗಳನ್ನು ವೇಗಗೊಳಿಸಲು ಪ್ರಗತಿ (PRAGATI-ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನ) ಹೇಗೆ ಸಹಾಯ ಮಾಡಿದೆ ಎಂಬುದನ್ನು ಈ ಅಧ್ಯಯನವು ವಿಶ್ಲೇಷಿಸುತ್ತದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೈದ್ ಬ್ಯುಸಿನೆಸ್ ಸ್ಕೂಲ್ ನ ಡೀನ್ ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ಪ್ರೊ. ಸೌಮಿತ್ರ ದತ್ತಾ ಅವರು ಈ ಅಧ್ಯಯನ ವರದಿ ಕುರಿತು ಉಪನ್ಯಾಸ ನೀಡಿದರು.
ಉನ್ನತ ಮಟ್ಟದ ನಾಯಕತ್ವವು ಡಿಜಿಟಲ್ ಪ್ಲಾಟ್‌ಫಾರ್ಮ್ ಗಳನ್ನು ಬಳಸಿಕೊಂಡು ಉದಯೋನ್ಮುಖ ಆರ್ಥಿಕತೆಗಳಲ್ಲಿ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ಒಳನೋಟಗಳನ್ನು ಒದಗಿಸಲು ಭಾರತದಾದ್ಯಂತ ಸರ್ಕಾರಿ ಅಧಿಕಾರಿಗಳು, ಪ್ರಾಜೆಕ್ಟ್ ಮ್ಯಾನೇಜರ್ ಗಳು ಮತ್ತು ಕ್ಷೇತ್ರ ಕಾರ್ಯಕರ್ತ ರೊಂದಿಗಿನ ಸಂದರ್ಶನಗಳನ್ನು ಅಧ್ಯಯನವು ಒಳಗೊಂಡಿದೆ.
ನಂತರ "ನಾಯಕತ್ವ ಮತ್ತು ನಾವಿನ್ಯತೆ ಮೂಲಕ ಭಾರತದ ರೂಪಾಂತರ" ಕುರಿತ ಚರ್ಚಾ ಗೋಷ್ಠಿ ನಡೆಯಿತು. ಎಲ್ & ಟಿ ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಎನ್ ಸುಬ್ರಹ್ಮಣ್ಯನ್, ಸಾಮರ್ಥ್ಯ ನಿರ್ಮಾಣ ಆಯೋಗದ ಅಧ್ಯಕ್ಷರಾದ ಆದಿಲ್ ಝೈನುಲಭಾಯಿ, ವಿಶ್ವ ಬ್ಯಾಂಕ್ ಸಮೂಹದ ಮುಖ್ಯ ಅರ್ಥಶಾಸ್ತ್ರಜ್ಞರು ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಇಂದರ್ಮಿತ್ ಎಸ್ ಗಿಲ್ ಭಾಗವಹಿಸಿದ್ದರು.
ಐಐಎಂ ಬೆಂಗಳೂರಿನ ನಿರ್ದೇಶಕರಾದ ಪ್ರೊ. ರಿಷಿಕೇಶ್ ಕೃಷ್ಣನ್ ಅವರು ಕಾರ್ಯಕ್ರಮ ಚರ್ಚಾ ಗೋಷ್ಠಿಯನ್ನು ನಡೆಸಿಕೊಟ್ಟರು.
ಅಧ್ಯಯನ ವರದಿಯು ಆಕ್ಸ್‌ಫರ್ಡ್ ನ ಸೈದ್ ಬಿಸಿನೆಸ್ ಸ್ಕೂಲ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.