ಪರಿಷತ್ ಚುನಾವಣೆ | ಬೆಂಗಳೂರು ನಗರ ಪದವೀಧರ ಕ್ಷೇತ್ರ ; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಂ.ಪುಟ್ಟಸ್ವಾಮಿ ಕಣಕ್ಕೆ

Update: 2024-05-15 11:37 GMT

ಬೆಂಗಳೂರು : ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಬೆಂಗಳೂರು ನಗರ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಪುಟ್ಟಸ್ವಾಮಿ ಅವರು ಬೆಂಗಳೂರಿನ ಶಾಂತಿನಗರ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಪದವೀಧರ ಮತದಾರರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಎಂ.ಪುಟ್ಟಸ್ವಾಮಿ, "ನಮ್ಮ ಎದುರಾಳಿಗಳಾಗಿ ಘಟಾನುಘಟಿಗಳು ಸ್ಪರ್ದೆ ಮಾಡಿರುವ ಹಿನ್ನಲೆಯಲ್ಲಿ ನಮ್ಮ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಲಾಗುವುದು. ಈ ಭಾರೀ ಶತಗತಾಯ ಗೆಲುವು ಸಾಧಿಸಲು ಅವಿರತ ಶ್ರಮವಹಿಸಲಾಗುವುದು ಪದವೀಧರರ ಪರವಾಗಿ ರಾಜ್ಯ ಸರ್ಕಾರದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಜಾರಿತರಲು ಪ್ರಯತ್ನಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳ ಭರ್ತಿಗಾಗಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಲಾಗುವುದು" ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಎಂ.ಪುಟ್ಟಸ್ವಾಮಿ ಬೆಂಗಳೂರು ನಗರ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯ ದೇವೇಗೌಡ ಅವರಿಗೆ ಟಿಕೇಟ್ ಲಭಿಸಿದೆ. ಇದರಿಂದ ಅಸಮಾಧಾನಗೊಂಡಿರುವ ಎಂ.ಪುಟ್ಟಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News