×
Ad

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ : ಬಿಜೆಪಿ ಮಾಜಿ ಶಾಸಕನ ಆಪ್ತರ ಮನೆಯಲ್ಲಿ ಪೆನ್‍ಡ್ರೈವ್ ಜಪ್ತಿ

Update: 2024-05-16 23:08 IST

ಪ್ರಜ್ವಲ್ ರೇವಣ್ಣ 

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ ಸಂಬಂಧ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರು ಎನ್ನಲಾದ ಹಲವರ ಮನೆಯಲ್ಲಿ ಪೆನ್‍ಡ್ರೈವ್‍ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರು ಎನ್ನಲಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಪುಟ್ಟರಾಜು, ನವೀನ್ ಗೌಡ, ಚೇತನ್‍ಗೆ ಸೇರಿದ ನಿವಾಸಗಳ ಮೇಲೆ ಸಿಟ್ ತನಿಖಾಧಿಕಾರಿಗಳು ದಾಳಿ ನಡೆಸಿದಾಗ 10 ಪೆನ್‍ಡ್ರೈವ್ ಮತ್ತು ಒಂದು ಹಾರ್ಡ್ ಡಿಸ್ಕ್ ಪತ್ತೆಯಾಗಿದೆ. ಇವುಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಎಫ್‍ಎಸ್‍ಎಲ್‍ಗೆ ರವಾನಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿ ನಡೆಸಿದ ಕೆಲ ಕಡೆಯಲ್ಲಿ ಸಿಕ್ಕ ಸಿಸಿ ಕ್ಯಾಮರಾಗಳ ದೃಶ್ಯಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್ ಡಿಸ್ಕ್‌ ಗಳಲ್ಲಿರುವ ವಿಡಿಯೊಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News