×
Ad

ಪ್ರಜ್ವಲ್ ರೇವಣ್ಣ ಪ್ರಕರಣ | ಎಸ್‍ಐಟಿ ತಂಡಕ್ಕೆ ಹೆಚ್ಚುವರಿಯಾಗಿ 8 ಮಂದಿ ಅಧಿಕಾರಿಗಳ ನೇಮಕ

Update: 2024-05-04 19:14 IST

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಠಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರವಾಗಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ರಾಜ್ಯ ಸರಕಾರ ಹೆಚ್ಚುವರಿಯಾಗಿ 8 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಿರುವುದಾಗಿ ತಿಳಿಸಿದೆ.

ಎಸ್‍ಪಿ ಸಿ.ಎ.ಸೈಮನ್, ಪಿಐ ರಾವ್‍ಗಣೇಶ್ ಜರ್ನಾಧನ್, ಸಿಪಿಐ ಶ್ರೀಧರ್.ಬಿ.ಎಸ್, ಎಎಸ್‍ಐ ಅಲ್ಲಾಬಕ್ಷ, ಹೆಡ್ ಕಾನ್‍ಸ್ಟೇಬಲ್ ಸರಸ್ವತಿ, ಕಾನ್‍ಸ್ಟೇಬಲ್‍ಗಳಾದ ಎಸ್.ಎನ್. ಮಮತಾ, ಜಾಫರ್ ಸಾಧಿಕ್ ಹಾಗೂ ಹರೀಶ್ ಬಾಬು ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ತನಿಖೆ ಮುಖ್ಯಸ್ಥರಾಗಿರುವ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡಕ್ಕೆ ಕಳೆದ ವಾರ 18 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News