×
Ad

ನಮ್ಮ ಮೆಟ್ರೊ 'ಹಳದಿ ಮಾರ್ಗ'ಕ್ಕೆ ಪ್ರಧಾನಿ ಮೋದಿ ಚಾಲನೆ

Update: 2025-08-10 13:03 IST

    Screengrab : x/@ANI

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು 'ನಮ್ಮ ಮೆಟ್ರೊ' ಹಳದಿ ಮಾರ್ಗಕ್ಕೆ ರವಿವಾರ(ಆ.10) ಚಾಲನೆ ನೀಡಿದ್ದಾರೆ.

ನಮ್ಮ ಮೆಟ್ರೊ ಹಳದಿ ಮಾರ್ಗ 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು 16 ನಿಲ್ದಾಣಗಳನ್ನು ಒಳಗೊಂಡಿವೆ.

ಮೆಟ್ರೋ ಹಳದಿ ಮಾರ್ಗವು ಒಟ್ಟು 19.15 ಕಿ.ಮೀ. ಉದ್ದವಿದೆ. ಇದರೊಂದಿಗೆ, ನಗರದಲ್ಲಿ 76.95 ಕಿ.ಮೀ. ಇದ್ದ 'ನಮ್ಮ ಮೆಟ್ರೊ' ಜಾಲ 96 ಕಿ.ಮೀ.ಗೆ ವಿಸ್ತರಣೆಗೊಂಡಂತಾಗಿದೆ.

ಹಳದಿ ಮಾರ್ಗದ ನಿಲ್ದಾಣಗಳು :

ಬೊಮ್ಮಸಂದ್ರ, ಹೆಬ್ಬಗೋಡಿ,  ಹುಸ್ಕೂರು ರಸ್ತೆ, ಇನ್ಫೊಸಿಸ್‌ ಫೌಂಡೇಷನ್‌ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್‌ ಸಿಟಿ,  ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಬಿಟಿಎಂ ಲೇಔಟ್‌, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್‌.ವಿ. ರಸ್ತೆ ನಿಲ್ದಾಣಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News