×
Ad

ರಾಹುಲ್ ಗಾಂಧಿ ಆ.5ಕ್ಕೆ ರಾಜ್ಯಕ್ಕೆ ಬರುವುದೇ ದೊಡ್ಡ ನಾಟಕ : ಆರ್.ಅಶೋಕ್

Update: 2025-07-31 19:39 IST

ಬೆಂಗಳೂರು : ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ. ಅಂತಹ ಪಕ್ಷ ಈಗ ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿಯೇ ಚುನಾವಣಾ ಅಕ್ರಮ ಮಾಡಿದ್ದಾರೆ ಎಂದು ಕೋರ್ಟ್‍ನಲ್ಲಿ ಸಾಬೀತಾಗಿತ್ತು. ರಾಹುಲ್ ಗಾಂಧಿ ಆ.5ಕ್ಕೆ ರಾಜ್ಯಕ್ಕೆ ಬರುವುದೇ ದೊಡ್ಡ ನಾಟಕ. ಇಲ್ಲಿ ಸರಕಾರ ನಡೆಯುತ್ತಿಲ್ಲ, ಬದಲು ಸಿಎಂ ಕುರ್ಚಿಗಾಗಿ ಕಲಹ ನಡೆಯುತ್ತಿದೆ. ಅದನ್ನು ಮರೆಮಾಚಲು ಚುನಾವಣಾ ಅಕ್ರಮದ ವಿಷಯ ಪ್ರಸ್ತಾಪ ಮಾಡಲಾಗಿದೆ ಎಂದು ದೂರಿದರು.

ಚುನಾವಣೆ ನಡೆದಾಗ ಕೋರ್ಟ್ ಮೊರೆ ಹೋಗದೆ ಈಗ ಆರೋಪ ಮಾಡಲಾಗುತ್ತಿದೆ. ಅಭಿವೃದ್ಧಿ ಶೂನ್ಯತೆಯನ್ನು ಮರೆಮಾಚಲು ಈ ರೀತಿ ಮಾಡಲಾಗುತ್ತಿದೆ. ಸಾಕ್ಷಿ ಇದ್ದರೆ ನ್ಯಾಯಾಲಯದ ಮೊರೆ ಹೋಗುತ್ತಿದ್ದರು. ಸಾಕ್ಷಿ ಇಲ್ಲವೆಂದೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇಂತಹ ಅಧಿಕಾರಿ ಮಾಡಿದ್ದಾರೆಂದು ನಿರ್ದಿಷ್ಟವಾಗಿ ತಿಳಿಸಲಿ ಎಂದರು.

ಡ್ರಗ್ಸ್ ಮಾಫಿಯಾ: ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಬೆಳೆದಿದೆ. ಇದಕ್ಕೆ ಸರಕಾರವೇ ಕಾರಣ. ಗೃಹ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇವೆಲ್ಲದರ ಪರಿಣಾಮವಾಗಿ ಇಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಪೊಲೀಸರು ಇಲ್ಲಿಗೆ ಬಂದು ಬಂಧನ ಮಾಡುವುದು ನಮ್ಮ ಪೊಲೀಸರಿಗೆ ಅಪಮಾನವಾಗಿದೆ ಎಂದು ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News