×
Ad

'ರಾಮೇಶ್ವರಂ ಕೆಫೆ’ ಸ್ಫೋಟ ಪ್ರಕರಣ: ಆರೋಪಿಯ ಜಾಡು ಹಿಡಿದು ಬಳ್ಳಾರಿ ತಲುಪಿದ ಎನ್ಐಎ

Update: 2024-03-07 10:44 IST

ಬಳ್ಳಾರಿ, ಮಾ.7: ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶಂಕಿತನ ಜಾಡು ಹಿಡಿದು ಬಳ್ಳಾರಿಗೆ ತಲುಪಿದ್ದು, ಪರಿಶೀಲನೆ ನಡೆಸಿದೆ.

ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಗರಕ್ಕೆ ಆಗಮಿಸಿದ ಎನ್ಐಎ ತಂಡ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು.

ಬಾಂಬ್ ಸ್ಫೋಟದ ಬಳಿಕ ಶಂಕಿತನು ತುಮಕೂರು ಬಸ್ ನಿಲ್ದಾಣಕ್ಕೆ ತೆರಳಿದ್ದ ಎನ್ನಲಾಗಿದ್ದು, ಅಲ್ಲಿಂದ ಬಸ್ ಹಿಡಿದು ಬಳ್ಳಾರಿಗೆ ಬಂದಿರುವ ಬಗ್ಗೆ ಎನ್ಐಗೆ ಸುಳಿವು ಸಿಕ್ಕಿದೆ. ಬಳ್ಳಾರಿ ಬಸ್ ನಿಲ್ದಾಣದಿಂದ ಆತ ಮತ್ತೊಂದು ಬಸ್ ಹತ್ತಿ ಬೇರೆ ಕಡೆಗೆ ಹೋಗಿದ್ದಾನೆ ಎಂದು ಎನ್ಐಎ ಅಧಿಕಾರಿಗಳ ಅನುಮಾನ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News