ಚಿನ್ನ ಸಾಗಾಟ ಪ್ರಕರಣ : ಕಮಿಷನ್ ಪಡೆಯುತ್ತಿದ್ದ ರನ್ಯಾ ರಾವ್, ರೂವಾರಿ ಪತ್ತೆಗೆ ತನಿಖೆ ಚುರುಕು
ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾರಾವ್ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಈಕೆ 1 ಕೆಜಿ ಚಿನ್ನ ಸಾಗಾಟಕ್ಕೆ ಕಮಿಷನ್ ಪಡೆಯುತ್ತಿದ್ದಳು ಎನ್ನುವ ಮಾಹಿತಿ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ರೂವಾರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದು ಬMದಿದೆ.
ಬಂಧನಕ್ಕೊಳಗಾಗಿರುವ ರನ್ಯಾ, 1 ಕೆಜಿ ಚಿನ್ನ ಸಾಗಾಟಕ್ಕೆ 4 ರಿಂದ 5 ಲಕ್ಷ ಕಮಿಷನ್ ಪಡೆಯುತ್ತಿದ್ದ ಅಂಶ ಬಯಲಾಗಿದ್ದು, ಈ ಪ್ರಕರಣದಲ್ಲಿ ನಟಿ ಪಾತ್ರ ಧಾರಿಯಾಗಿದ್ದು, ಅಸಲಿ ಆರೋಪಿ ಬೇರೆಯವರೇ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 12.56 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳೊಂದಿಗೆ ಬಂಧಿಸಲ್ಪಟ್ಟ ರನ್ಯಾ ರಾವ್ ಕಳೆದ ಒಂದು ವರ್ಷದಲ್ಲಿ 30 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ. ಒಟ್ಟಾರೆಯಾಗಿ, ಡಿಆರ್‌ಐ ಆಕೆಯ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿ 2.06 ಕೋಟಿ ರೂ.ಮೌಲ್ಯದ ಚಿನ್ನದ ಆಭರಣಗಳು ಮತ್ತು 2.67 ಕೋಟಿ ರೂ.ನಗದು ವಶಪಡಿಸಿಕೊಂಡ ನಂತರ 17.29 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.
ಇನ್ನೂ, ವಿಮಾನ ನಿಲ್ದಾಣದ ಭದ್ರತೆಯಿಂದ ತಪ್ಪಿಸಿಕೊಳ್ಳಲು ಚಿನ್ನವನ್ನು ಕಳ್ಳಸಾಗಣೆ ಮಾಡಲು ರಾವ್ ಮಾರ್ಪಡಿಸಿದ ಜಾಕೆಟ್‍ಗಳು ಮತ್ತು ಸೊಂಟದ ಬೆಲ್ಟ್ ಗಳನ್ನು ಬಳಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಳೆದ ಕೆಲವು ವಾರಗಳಿಂದ, ನಟಿ ಆಗಾಗ್ಗೆ ದುಬೈಗೆ ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ವಿಮಾನ ನಿಲ್ದಾಣ ಠಾಣೆ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ರನ್ಯಾಗೆ ಭದ್ರತಾ ತಪಾಸಣೆಯನ್ನು ತಪ್ಪಿಸಲು ಸಹಾಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.