‘ವಕ್ಫ್ ತಿದ್ದುಪಡಿ ಕಾಯ್ದೆ’ ವಿರೋಧಿಸಿ ಜೂ.23ರಂದು ದುಂಡುಮೇಜಿನ ಸಭೆ
Update: 2025-06-22 23:31 IST
ಬೆಂಗಳೂರು : ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ-2025ನ್ನು ವಿರೋಧಿಸಿ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಜೂ.23ರ ಸಂಜೆ 4ಗಂಟೆಗೆ ನಗರದ ಶಾಸಕರ ಭವನದಲ್ಲಿ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಸಿಖ್ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಪ್ರೊ. ಜಗಮೋಹನ್ ಸಿಂಗ್, ಜಮಾಅತೆ ಇಸ್ಲಾಮಿ ಹಿಂದ್-ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ, ಅಂಕಣಕಾರ ಶಿವಸುಂದರ್, ವಕೀಲೆ ಅಫ್ಸರ್ ಝಹಾನ್, ವಕೀಲ ಎಂ.ಕೆ.ಮೇತ್ರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.