ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿಲ್ಲ : ಸದಾನಂದ ಗೌಡ
Update: 2025-01-25 21:16 IST
ಬೆಂಗಳೂರು: ʼಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿಲ್ಲ. ಅಲ್ಲದೆ, ಕೊಟ್ಟ ಜವಾಬ್ದಾರಿ ನಿರ್ವಹಣೆಯನ್ನೂ ಯಶಸ್ವಿಯಾಗಿ ಮಾಡಲಿಲ್ಲ. ಅವರು ಅತೃಪ್ತರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ವಿಫಲರಾದರುʼ ಎಂದು ಸದಾನಂದ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ʼಗೊಂದಲಗಳ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದರೆ ಒಂದಷ್ಟು ಕಡಿಮೆಯಾಗುತ್ತಿದ್ದವು. ಆಂತರಿಕ ಕಚ್ಚಾಟದಲ್ಲಿ ತೊಡಗಿರುವವರು ಸಂಘಟನಾ ಪರ್ವದಲ್ಲಿ ಭಾಗವಹಿಸಿಲ್ಲ. ಸಂಘಟನಾ ಪರ್ವ, ಸಂಘಟನಾ ಪರ್ವ ಎಂದು ಹೇಳುತ್ತಾರೆ. ಆದರೆ ಆಂತರಿಕಾ ಕಚ್ಚಾಟ ಪರ್ವ ಇದಾಗಿದೆ. ಶಿಸ್ತಿನ ಪಕ್ಷ, ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಸೋಮಶೇಖರ್, ಹೆಬ್ಬಾರ್ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದರೂ ಕ್ರಮ ಆಗಿಲ್ಲʼ ಎಂದು ಹೇಳಿದರು.