×
Ad

ಸಾಗರ | ಚಿರತೆಯ ಉಗುರು, ಹಲ್ಲು ಸಾಗಾಟ ಪತ್ತೆ: ಆರೋಪಿಯ ಬಂಧನ

Update: 2024-11-05 11:12 IST

ಸಾಗರ: ಅಕ್ರಮವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಅರಣ್ಯ ಸಂಚಾರ ಪೊಲೀಸ್ ದಳ ಇಲ್ಲಿನ ಆನಂದಪುರದ ದಾಸಕೊಪ್ಪ ಸರ್ಕಲ್ ಪೆಟ್ರೋಲ್ ಬಂಕ್ ಹತ್ತಿರ ಬಂಧಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಹಾರೊಗೊಪ್ಪ ನಿವಾಸಿ ಲೋಕೇಶ್ ಭಾಗ್ಯಣ್ಣ ಬಂಧಿತ ಆರೋಪಿ. ಆತನಿಂದ ಚಿರತೆಯ 16 ಉಗುರು, 3 ಹಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಸಂಚಾರ ಪೊಲೀಸ್ ದಳದವರು ತಿಳಿಸಿದ್ದಾರೆ.

ಅನುಮಾನದ ಹಿನ್ನೆಲೆಯಲ್ಲಿ ಲೋಕೇಶ್ ನನ್ನು ವಿಚಾರಣೆಗೊಳಪಡಿಸಿದಾಗ ಈ ಅಕ್ರಮ ಸಾಗಾಟ ಪತ್ತೆಯಾಗಿದೆ. ತಕ್ಷಣ ಸೊತ್ತು ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸಾಗರ ಅರಣ್ಯ ಸಂಚಾರ ಪೊಲೀಸ್ ದಳದ ಸಬ್ ಇನ್ ಸ್ಪೆಕ್ಟರ್ ವಿನಾಯಕ ಕೆ. ಸಿಬ್ಬಂದಿಯಾದ ಗಣೇಶ್, ವಿಶ್ವನಾಥ, ಆಂಜನೇಯ ಮತ್ತು ದಿನೇಶ, ಪ್ರಮೋದಕುಮಾರಿ, ಮಡಿಕೇರಿಯ ಸಿಐಡಿ ಅರಣ್ಯ ಘಟಕದ ಎಸ್ಪಿ ಎಸ್.ಎಸ್. ಕಾಶಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News