×
Ad

ಸಮಸ್ತ ನೂರನೇ ವಾರ್ಷಿಕ ಉದ್ಘಾಟನಾ ಸಮ್ಮೇಳನದ ಪ್ರಯುಕ್ತ ವಿಜಿಲೆಂಟ್ ವಿಖಾಯ ಮೀಟ್, ಎಜು ಸಮ್ಮಿಟ್

Update: 2024-01-28 13:41 IST

ಬೆಂಗಳೂರು: ಸಮಸ್ತ ನೂರನೇ ವಾರ್ಷಿಕ ಉದ್ಘಾಟನಾ ಸಮ್ಮೇಳನದ ಭಾಗವಾಗಿ ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಸಮಿತಿಯ ವತಿಯಿಂದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ವಿಜಿಲೆಂಟ್ ವಿಖಾಯ ಮೀಟ್ ಮತ್ತು ಎಜು ಸಮ್ಮಿಟ್ ನಡೆಯಿತು.

ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಸಮಾರಂಭವನ್ನು ಉದ್ಘಾಟಿಸಿದರು . ವಿಜಿಲೆಂಟ್ ವಿಖಾಯ ಮೀಟ್ ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಫೈಝಿ ವೆಳ್ಳಾಯಿಕೊಡ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಉಪಾಧ್ಯಕ್ಷರಾದ ಸತ್ತಾರ್ ಪಂದಲ್ಲೂರ್ ವಿಷಯ ಮಂಡನೆ ನಡೆಸಿದರು.

ತಝ್ಕಿಯತ್ ಸೆಷನ್‌ನಲ್ಲಿ ಅಂತಾರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಆಧ್ಯಾತ್ಮಿಕ ಆಶಿರ್ವಚನ ನೀಡಿದರು. ಸ್ವಾಗತ ಸಮಿತಿ ಚೇರ್ಮನ್ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್, ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ ಎಂ ಅಬ್ದುಲ್ಲಾ ಮುಸ್ಲಿಯಾರ್ ಎಡಪ್ಪಲಂ ಶುಭಾಶಿರ್ವಚನ ನೀಡಿದರು.

ಎಜು ಸಮ್ಮಿಟ್ ಶೈಕ್ಷಣಿಕ ಸಮಾವೇಶದಲ್ಲಿ ಜಾಫರ್ ಐ.ಎ.ಎಸ್ , ಶಾಹಿದ್ ತಿರುವಳ್ಳೂರ್ ಐ.ಎಫ್.ಎಸ್ ಹಾಗೂ ಫಾಲ್ಕನ್ ಗ್ರೂಪ್ ನಿರ್ದೇಶಕರಾದ ಡಾ. ಅಬ್ದುಲ್ ಸುಬ್‌ಹಾನ್ ಎಜುಕೇಟರ್‌ಗಳನ್ನು ಉದ್ದೇಶಿಸಿ ವಿಷಯ ಮಂಡನೆ ನಡೆಸಿದರು.

ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ, ರಾಜ್ಯ ಸಭೆ ಡೆಪ್ಯುಟಿ ಚೇರ್ಮನ್ ರಹ್ಮಾನ್ ಖಾನ್ ಶುಭ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News