×
Ad

ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದ ಸಚಿವ ಸಂತೋಷ್‌ ಲಾಡ್‌ಗೆ ವಿವಿಧ ಸಂಘಟನೆಗಳಿಂದ ಅಭಿನಂದನೆ

Update: 2025-04-26 20:50 IST

ಬೆಂಗಳೂರು  ಜಮ್ಮು-ಕಾಶ್ಮೀರ ಪಹಲ್ಗಾಮ್‍ನಲ್ಲಿ ಇತ್ತೀಚೆಗೆ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದನಾ ದಾಳಿಯ ನಂತರ ಸಂತ್ರಸ್ತರಾಗಿದ್ದ 180 ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿನಂದನೆ ಸಲ್ಲಿಸಿದರು.

ಶನಿವಾರ ಬೆಂಗಳೂರಿನಲ್ಲಿರುವ ಲಾಡ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀ ದುರ್ಗಾ ಫೌಂಡೇಶನ್, ಕೆವಿಕೆ ಫೌಂಡೇಶನ್ ಸೇರಿದಂತೆ ಇನ್ನಿತರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಪುಷ್ಪಾಗುಚ್ಚವನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಕುರುಬರ ಪಡೆ ಸಂಚಾಲಕ ಲೋಕೇಶ್ ಹಗರಿಬೊಮ್ಮನಹಳ್ಳಿ, ಸಂಪತ್ ಸುಬ್ಬಯ್ಯ, ಹನುಮಂತ ಹಾಲಿಗೇರಿ, ಕುಶಾಲ್ ಹರವೇಗೌಡ, ದಶಮಿ, ರೇಖಾ ಶ್ರೀನಿವಾಸ್, ಖುಷಿ, ದೀಪ ನಾಯಕ್, ಶಾಜಿಯಾ ಸುಲ್ತಾನ್, ತ್ರಿವೇಣಿ, ನಕುಲ್, ಸಾರಥಿ ಕುಮಾರ್ ನಂದೀಶ್, ವಾಸಿಂ, ಮತಿನ್, ಆದಿತ್ಯ ಜ್ಞಾನಿ, ಮಂಜುನಾಥ, ತ್ರಿವೇಣ್ ಮುರುಳಿ, ಕವಿತಾ ರೆಡ್ಡಿ, ತ್ರಿವೇಣಿ, ಅರ್ಜುನ್ ಗೌಡ, ಸಾರಥಿ ಕುಮಾರ್, ನಕುಲ್ ಹಾಗೂ ಇನ್ನಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News