×
Ad

ಬಿಜೆಪಿ ಶಾಸಕರ ಹುಟ್ಟುಹಬ್ಬಕ್ಕೆ ಹಾಕಲಾಗಿದ್ದ ಫ್ಲೆಕ್ಸ್ ತಲೆ ಮೇಲೆ ಬಿದ್ದು ಕೋಮಾಗೆ ಜಾರಿದ ವೃದ್ಧ!

Update: 2024-07-08 23:40 IST

Photo: tv9kannada.com

ಬೆಂಗಳೂರು: ಇಲ್ಲಿನ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಹಾಕಲಾಗಿದ್ದ ಫ್ಲೆಕ್ಸ್ ತಲೆ ಮೇಲೆ ಬಿದ್ದು ವಯೋವೃದ್ಧರೊಬ್ಬರು ಕೋಮಾ ಸ್ಥಿತಿಗೆ ಜಾರಿರುವ ಘಟನೆ ವರದಿಯಾಗಿದೆ.

ಗಾಯಗೊಂಡ ವೃದ್ಧನನ್ನು ರಾಜಾನುಕುಂಟೆ ನಿವಾಸಿ ಭಕ್ತ ವತ್ಸಲಾ(70) ಎಂದು ಗುರುತಿಸಲಾಗಿದೆ.

ಜು.6ರ ಶನಿವಾರ ಘಟನೆ ನಡೆದಿದ್ದು, ತನ್ನ ಮೊಮ್ಮಗನನ್ನು ಶಾಲೆಯಿಂದ ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಕಂಬಕ್ಕೆ ಕಟ್ಟಲಾಗಿದ್ದ ಫ್ಲೆಕ್ಸ್ ಕಳಚಿ ಭಕ್ತ ವತ್ಸಲಾ ಅವರ ತಲೆ ಮೇಲೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ಧ ಭಕ್ತ ವತ್ಸಲಾ ಅವರು ಕೋಮಾ ಸ್ಥಿತಿಗೆ ಜಾರಿರುವುದಾಗಿ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ, ಫ್ಲೆಕ್ಸ್ ಬಿದ್ದ ಸ್ಥಳ ಸಿಂಗನಾಯಕನಹಳ್ಳಿ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News