ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ರಾಜ್ಯದ 7 ಪೊಲೀಸ್ ಅಧಿಕಾರಿಗಳು ಆಯ್ಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ತನಿಖಾ ಕ್ಷೇತ್ರದಲ್ಲಿ ಆರು ಮಂದಿ ಹಾಗೂ ವಿಧಿವಿಜ್ಞಾನ ವಿಭಾಗದಲ್ಲಿ (ಎಫ್‍ಎಸ್‍ಎಲ್) ಒಬ್ಬರು ಸೇರಿ ರಾಜ್ಯದ ಏಳು ಮಂದಿ ಪೊಲೀಸ್ ಅಧಿಕಾರಿ 2026ನೇ ಸಾಲಿನ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ.
ತನಿಖಾ ಕ್ಷೇತ್ರದಲ್ಲಿ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶೋಭ ಎನ್., ಬೆಳಗಾವಿ ನಗರ ಮಾಳಮಾರುತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಾವುದ್ದೀನ್ ರುಕ್ಮುದ್ದೀನ್ ಗಡೇಕರ್, ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯ ಇನ್ಸ್ ಪೆಕ್ಟರ್ ಎಂ ಶ್ರೀನಿವಾಸ್ ರಾವ್, ದೇವದುರ್ಗ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್ ಪದಕಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರು ನಗರದ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್(ಎಎಸ್‍ಐ) ರತ್ನಮ್ಮ ಕೆ., ಅಪರಾಧ ತನಿಖಾ ಇಲಾಖೆಯ(ಸಿಐಡಿ) ಸಿವಿಲ್ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಬಾಲಕೃಷ್ಣ ವೈ. ಮತ್ತು ಮೈಸೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ವಿಧಿ ವಿಜ್ಞಾನ ಪ್ರಯೋಗಾಲಯದ(ಆರ್ ಎಫ್‍ಎಸ್‍ಎಲ್) ಉಪನಿರ್ದೇಶಕ ಡಾ. ಚಂದ್ರಶೇಖರ್ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.