×
Ad

ಕೆ.ಆರ್.ಪುರಂ ಗ್ಯಾಸ್ ಸಿಲಿಂಡರ್ ಸ್ಫೋಟದ ಸಮಗ್ರ ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ

Update: 2025-10-25 14:42 IST

 ಶೋಭಾ ಕರಂದ್ಲಾಜೆ

ಬೆಂಗಳೂರು: ನಗರದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ತ್ರಿವೇಣಿನಗರದಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ಸ್ಫೋಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಒತ್ತಾಯಿಸಿದ್ದಾರೆ.

ಸ್ಫೋಟ ಸಂಭವಿಸಿದ ಸ್ಥಳ ವೀಕ್ಷಿಸಿದ ಬಳಿಕ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ತ್ರಿವೇಣಿನಗರದಲ್ಲಿ ಇಂದು ಬೆಳಿಗ್ಗೆ ಸ್ಫೋಟ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮನೆ ಪೂರ್ತಿ ಹಾನಿಗೆ ಒಳಗಾಗಿದೆ. ಸತ್ಯ ಹೊರಬರಲು ಅತ್ಯಂತ ಪ್ರಾಮಾಣಿಕವಾಗಿ ಫಾರೆನ್ಸಿಕ್ ವರದಿ ಲಭಿಸಬೇಕು. ಇಂಥ ಘಟನೆಗಳಿಂದ ಜನರು ಭಯಭೀತರಾಗುತ್ತಾರೆ ಎಂದು ಹೇಳಿದರು.

ಇಷ್ಟೊಂದು ದೊಡ್ಡ- ಬಲಿಷ್ಠ ಮನೆ ಕುಸಿತಕ್ಕೆ ಬಲವಾದ ಕಾರಣ ಇರಬೇಕು. ಸ್ಫೋಟಕ್ಕೆ ಗ್ಯಾಸ್ ಕಾರಣವೇ? ಬೇರೆ ಸ್ಫೋಟಕ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಮೃತರಿಗೆ ಸರಕಾರವು ತಕ್ಷಣ ಪರಿಹಾರ ಕೊಡಬೇಕು. ಗಾಯಾಳುಗಳಿಗೆ ಉಚಿತವಾದ ಚಿಕಿತ್ಸೆಯನ್ನು ಸರಕಾರ ಕೊಡಿಸಬೇಕು ಎಂದು ತಿಳಿಸಿದರು.

ದುರ್ಘಟನೆಯಿಂದ ಅಕ್ಕಪಕ್ಕದ ಮನೆಗಳಿಗೂ ತೊಂದರೆಯಾಗಿದೆ. ಪಕ್ಕದ ಮನೆಯವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಹಳ ಎತ್ತರದ ವರೆಗೆ ಗಾಜುಗಳು ಒಡೆದಿವೆ. ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ, ಜನರು ಬಂದು ನೆರವಾಗಿದ್ದಾರೆ ಎಂದರು.

ಸ್ಫೋಟದ ಕಾರಣಕರ್ತರನ್ನು ಪತ್ತೆ ಮಾಡಬೇಕು. ಇದರ ಸಮಗ್ರ ತನಿಖೆ ಮಾಡಬೇಕು ಎಂದು ತಿಳಿಸಿದರು.

ಅಕ್ಕಪಕ್ಕದ ಮನೆಗಳಿಗೆ ಆದ ಹಾನಿಯ ನಷ್ಟವನ್ನು ಭರಿಸಬೇಕು. ಭಾರತ್ ಪೆಟ್ರೋಲಿಯಂ ಸಿಲಿಂಡರ್ ಎಂಬ ಮಾಹಿತಿ ಸಿಕ್ಕಿದೆ. ಅವರೂ ತನಿಖೆ ನಡೆಸಬೇಕು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News