ಎಸ್‌ವೈಎಸ್ ಉಮ್ರಾ ಸರ್ವಿಸ್ ಉದ್ಘಾಟನೆ
ಬೆಂಗಳೂರು: ಉಮ್ರಾ ಆರಾಧನೆಯನ್ನು ಅತ್ಯಂತ ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ ನಿರ್ವಹಿಸುವ ಮತ್ತು ಉಮ್ರಾ ಯಾತ್ರಿಕರಿಗೆ ಗರಿಷ್ಠ ಪ್ರಮಾಣದ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಉಮ್ರಾ ಸೇವೆಯನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿ ನಡೆದ ಎಸ್‌ವೈಎಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸೈಯದ್ ಇಲ್ಯಾಸ್ ತಂಙಳ್ ಎಮ್ಮೆಮಾಡು ಹಾಗೂ ಸೈಯದ್ ಶಾಫಿ ನಈಮಿ ತಂಙಳ್ ಮಾರ್ನಳ್ಳಿ ಅವರು ಉಮ್ರಾ ಸರ್ವಿಸ್ ಉದ್ಘಾಟಿಸಿದರು.
ರಾಜ್ಯಾಧ್ಯಕ್ಷ ಬಶೀರ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಮನ್ಸೂರ್ ಅಲಿ ತೀರ್ಥಹಳ್ಳಿ, ಹಫೀಲ್ ಸಅದಿ ಮಡಿಕೇರಿ, ಅಬ್ದುರ್ರಹ್ಮಾನ್ ರಝ್ವಿ ಉಡುಪಿ, ಇಬ್ರಾಹೀಂ ಖಲೀಲ್ ಮಾಲಿಕಿ, ಅಲೀ ಸಖಾಫಿ ಅಶ್ಅರಿಯ್ಯ, ಹಸೈನಾರ್ ಆನೆಮಹಲ್, ಹಂಝ ಮದನಿ ಕಾಂತಿಜಾಲ್, ಶಾಹುಲ್ ಹಮೀದ್ ಮದದಿ ಶಿವಮೊಗ್ಗ, ಆಸಿಫ್ ಕೃಷ್ಣಾಪುರ, ಅನಸ್ ಸಿದ್ದೀಖಿ ಕಾಮಿಲ್ ಸಖಾಫಿ, ಮಹ್ಬೂಬ್ ಸಖಾಫಿ, ಅಬ್ದುರ್ರಹ್ಮಾನ್ ಪ್ರಿಂಟೆಕ್, ಅಹ್ಮದ್ ಮದನಿ ಕೊಡಗು, ಇಬ್ರಾಹೀಂ ಮೂಡಿಗೆರೆ, ಅಶ್ರಫ್ ಸಖಾಫಿ ಮೂಡಡ್ಕ, ಅತಾವುಲ್ಲಾ ಮೈಸೂರು, ಶಾಫೀ ಸಖಾಫಿ ಕೊಕ್ಕಡ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ನಾಸಿರ್ ಕ್ಲಾಸಿಕ್, ಅಶ್ರಫ್ ಎರ್ಮಾಡ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಕೆಎಂ ಸಿದ್ದೀಖ್ ಸ್ವಾಗತಿಸಿ, ಇಬ್ರಾಹೀಂ ಸಖಾಫಿ ವಂದಿಸಿದರು.
ಎಸ್‌ವೈಎಸ್ ಉಮ್ರಾ ಸರ್ವಿಸ್ ಮೂಲಕ ಪ್ರಯಾಣಿಸಲು ಬಯಸುವವರು 8970786313 ನಂಬರ್ ನಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.