×
Ad

ದರ್ಶನ್ ಪ್ರಕರಣದಲ್ಲಿ ಕಾನೂನು ಅಂತಿಮ : ಎಚ್.ಕೆ.ಪಾಟೀಲ್

Update: 2024-06-13 19:41 IST

ಬೆಂಗಳೂರು : ನಟ ದರ್ಶನ್ ಬಂಧನ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕ್ರಮ ವಹಿಸಲಾಗಿದ್ದು, ಅದೇ ಅಂತಿಮ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಗಣ್ಯ ವ್ಯಕಿ ಎನ್ನುವ ಕಾರಣಕ್ಕೆ ವಿಶೇಷ ಅನುಕೂಲತೆ ಮಾಡಿಕೊಟ್ಟಿಲ್ಲ, ಮಾಡಿ ಕೊಡುವುದೂ ಇಲ್ಲ. ಯಾರೇ ಆಗಲಿ ಕಾನೂನು ರೀತ್ಯಾ ನಾವು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಪೊಲೀಸ್ ಠಾಣೆಯಲ್ಲಿ ಶಾಮಿಯಾನ ಹಾಕಿರುವುದು ಗೌಪ್ಯ ವಿಚಾರಣೆಗಲ್ಲ, ಹೆಚ್ಚುವರಿಯಾಗಿ ನಿಯೋಜಿತರಾದ ಸಿಬ್ಬಂದಿಯ ಅನುಕೂಲಕ್ಕಾಗಿ. ಇಲ್ಲಿ ಶಾಮಿಯಾನ ಹಾಕಿ ಮುಚ್ಚಲು ಅವಕಾಶ ಇದೆಯೇ ಎಂಬ ಪ್ರಶ್ನೆಯೇ ಬರಲ್ಲ. ನನಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News