×
Ad

ಬೆಂಗಳೂರು: ಕಾರು ಹರಿದು 3 ವರ್ಷದ ಮಗು ಮೃತ್ಯು

Update: 2023-12-16 23:18 IST

ಬೆಂಗಳೂರು: ಖಾಸಗಿ ಅಪಾರ್ಟ್‌ಮೆಂಟ್‌ವೊಂದರ ಅಂಗಳದಲ್ಲಿ ಕುಳಿತು ಆಟವಾಡುತ್ತಿದ್ದ ಮಗುವಿನ ಮೇಲೆಯೇ ಕಾರು ಹರಿದ ಪರಿಣಾಮ ಮಗು ಮೃತಪಟ್ಟ ಘಟನೆ ನಗರದ ಕಸುವಿನಹಳ್ಳಿಯ ಬಳಿ 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜೋಗ್ ಜುತಾರ್, ಅನಿತಾ ದಂಪತಿಗೆ ಸೇರಿದ ಅರ್ಬಿನಾ(3) ಎಂಬ ಹೆಣ್ಣು ಮಗುವಿನ ಮೇಲೆ ಚಾಲಕ ಕಾರು ಹತ್ತಿಸಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೊದಲು ತಮ್ಮ ಅರಿವಿಗೆ ಬಾರದೇ ಕಟ್ಟಡದ ಮೇಲಿಂದ ಮಗು ಬಿದ್ದಿರುವುದಾಗಿ ಪೋಷಕರು ದೂರು ಕೊಟ್ದಿದ್ದರು. ಆದರೆ ಮಗುವಿನ ದೇಹದಲ್ಲಿ ರಕ್ತಸ್ರಾವ ಆಗುತ್ತಿದ್ದುದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ನಂತರ ಎಕ್ಸ್ ಯುವಿ ಕಾರು ಮಗುವಿನ ಮೇಲೆ ಹರಿದಿರುವುದು ಗೊತ್ತಾಗಿದೆ.

ಈ ಸಂಬಂಧ ಕೃತ್ಯ ಎಸಗಿದ ಅಪಾರ್ಟ್‍ಮೆಂಟ್‍ನ ಸುಮನ್ ಎಕ್ಸ್ ಯುವಿ ಕಾರು ಚಾಲಕನ ವಿರುದ್ಧ ಇಲ್ಲಿನ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News