×
Ad

ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್‌ ಸವಾರನಿಗೆ 1.61 ಲಕ್ಷ ರೂ. ದಂಡ

Update: 2025-02-04 18:04 IST
Photo:X/@citymarkettrps

ಬೆಂಗಳೂರು: ದ್ವಿಚಕ್ರ ವಾಹನ ಸವಾರನೊಬ್ಬ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ್ದು, ಈ ಸಂಬಂಧ ಸಂಚಾರ ಪೊಲೀಸರು ಬರೋಬ್ಬರಿ 1.61 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಕೆಎ-05, ಜೆಎಕ್ಸ್-1344 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರ ಸಿಗ್ನಲ್ ಜಂಪ್, ಏಕಮುಖ ಚಾಲನೆ, ನಿಬರ್ಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ಹಲವು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಈ ಸಂಬಂಧ 311 ಬಾರಿ ನಿಯಮ ಉಲ್ಲಂಘನೆ ಆರೋಪದಡಿ 1.61 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಕಳೆದ ವರ್ಷ 1,05,500 ರೂ. ಇದ್ದ ದಂಡದ ಮೊತ್ತ, ಈ ವರ್ಷ 1,61,500 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ಸವಾರನಿಗೆ ಹಲವು ಬಾರಿ ನೋಟಿಸ್ ಸಹ ನೀಡಲಾಗಿದೆ. ನಿರ್ಲಕ್ಷ್ಯವಹಿಸಿ ಸಂಚಾರ ನಿಯಮ ಉಲ್ಲಂಘನೆ ಮುಂದುವರೆಸಿರುವುದಾಗಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News