×
Ad

ಬಿಬಿಎಂಪಿ ಕಸದ ಟ್ರಕ್‍ಗೆ ವಾಹನ ಢಿಕ್ಕಿ: ಬಾಲಕಿ ಮೃತ್ಯು

Update: 2024-01-29 19:07 IST

ಬೆಂಗಳೂರು: ಬಿಬಿಎಂಪಿ ಕಸದ ಟ್ರಕ್‍ಗೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ  ಅಪಘಾತದಲ್ಲಿ 14 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಇಲ್ಲಿನ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿ ರಸ್ತೆಯಲ್ಲಿ ವರದಿಯಾಗಿದೆ.

ಮೃತ ಬಾಲಕಿಯು ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಳು ಎಂಬುದಾಗಿ ಗೊತ್ತಾಗಿದೆ. ಈ ಘಟನೆ ಸಂಬಂಧ ಪುಲಕೇಶಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಬಿಎಂಪಿ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News