×
Ad

ಬೆಂಗಳೂರು| ರಿಕ್ಷಾ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವತಿ

Update: 2025-06-01 21:42 IST

Screengrab: X/@CheKrishnaCk_

ಬೆಂಗಳೂರು: ಆಟೋರಿಕ್ಷಾ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ದರ್ಪ ತೋರಿದ್ದ ಯುವತಿಯು ಪೊಲೀಸ್ ನೋಟಿಸ್ ಬಳಿಕ ರವಿವಾರ ಬೆಳ್ಳಂದೂರು ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಮಾಡಿದ್ದ ಯುವತಿ ಪನ್ಪೂರಿ ಮಿಶ್ರಾ(28) ಎಂಬಾಕೆಯನ್ನು ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಯುವತಿ ಬಿಹಾರ ಮೂಲದವಳಾಗಿದ್ದು, ನಗರದಲ್ಲಿ ತನ್ನ ಪತಿಯೊಂದಿಗೆ ವಾಸವಾಗಿದ್ದಾಳೆ ಎಂದು ತಿಳಿದು ಬಂದಿದೆ.

ಮೇ31ರಂದು ಸಂಜೆ 4 ಗಂಟೆ ಸುಮಾರಿಗೆ ಬೆಳ್ಳಂದೂರು ವೃತ್ತದಲ್ಲಿ ಕನ್ನಡಿಗ ಆಟೋ ಚಾಲಕ ಲೋಕೇಶ್ ಎಂಬುವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಯುವತಿಯು ಚಪ್ಪಲಿಯಿಂದ ಹಲ್ಲೆ ಮಾಡಿ ಸಾರ್ವಜನಿಕರ ಎದುರೇ ದರ್ಪ ತೋರಿದ್ದಾರೆ. ಈ ಬಗ್ಗೆ ಬೆಳ್ಳಂದೂರು ಪೊಲೀಸರಿಗೆ ಲೋಕೇಶ್ ದೂರು ನೀಡಿದ ಹಿನ್ನಲೆಯಲ್ಲಿ ಯುವತಿಯನ್ನು ಪತ್ತೆಹಚ್ಚಿ ಆಕೆಗೆ ನೋಟಿಸ್ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕೇಶ್ ಅವರು ಬೆಳ್ಳಂದೂರು ವೃತ್ತದ ಬಳಿ ತೆರಳುವಾಗ ಬಲಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವತಿ ವಾಹನ ನಿಲ್ಲಿಸಿ ಏಕಾಏಕಿ ಜಗಳ ತೆಗೆದಿದ್ದು, ‘ನನ್ನ ವಾಹನಕ್ಕೆ ನೀನು ಢಿಕ್ಕಿ ಹೊಡೆದಿದ್ದೀಯ’ ಎಂದು ಆರೋಪ ಮಾಡಿದ್ದಾರೆ.

ಈ ವೇಳೆ ಲೋಕೇಶ್ ಅವರು ‘ನಿಮ್ಮ ವಾಹನಕ್ಕೆ ಆಟೋ ತಗುಲಿಲ್ಲ. ನೀವು ಈ ರೀತಿ ರಸ್ತೆ ಮಧ್ಯೆ ಗಲಾಟೆ ಮಾಡುವುದು ಸರಿಯಲ್ಲ’ ಎಂದಾಗ ಕೆರಳಿದ ಯುವತಿ, ವಾಗ್ವಾದಕ್ಕಿಳಿದು ಲೋಕೇಶ್‍ಗೆ ತಮ್ಮ ಚಪ್ಪಲಿಯಿಂದ ಹಲವು ಬಾರಿ ಹೊಡೆದಿದ್ದು, ಇದರ ವಿಡಿಯೋಗಳನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News