×
Ad

ಬೆಳಗಾವಿ | 15 ವರ್ಷದ ಬಾಲಕಿ ಜೊತೆ ಗ್ರಾ.ಪಂ ಅಧ್ಯಕ್ಷನ ವಿವಾಹ ಆರೋಪ : ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

Update: 2025-08-31 16:28 IST

ಭೀಮಶಿ ಕಾಲಿಮಣಿ 

ಬೆಳಗಾವಿ : 15 ವರ್ಷದ ಬಾಲಕಿಯನ್ನು ಗ್ರಾಮ ‌ಪಂಚಾಯಿತಿ ಅಧ್ಯಕ್ಷರೊಬ್ಬರು ವಿವಾಹವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮ ‌ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಯಮಕನಮರಡಿ ವ್ಯಾಪ್ತಿಯಲ್ಲಿರುವ ಬಸ್ಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತ 2023ರ ನವೆಂಬರ್ 5ರಂದು 15 ವರ್ಷದ ಬಾಲಕಿಯೊಂದಿಗೆ ವಿವಾಹವಾಗಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಭೀಮಶಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿ ಸದ್ಯ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ದೂರು ಬಂದ ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಪರ್ವಿನ್ ಅವರ ನೇತೃತ್ವದ ತಂಡ ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಬಾರಿ ಭೇಟಿ ನೀಡಿ ಬಾಲಕಿಯನ್ನು ಪತ್ತೆಹಚ್ಚಲು ಯತ್ನಿಸಿತು. ಆದರೆ, ಬಾಲಕಿ ಪತ್ತೆ ಹಚ್ಚಲು ರಕ್ಷಣಾ ತಂಡ ವಿಫಲವಾಗಿತ್ತು.

ಬಂಧನದ ಭೀತಿಯಿಂದ ಭೀಮಶಿ ಕಾಲಿಮಣಿ ತನ್ನ ಪತ್ನಿಯು ಪ್ರಾಪ್ತವಯಸ್ಸಿನವಳು ಎಂದು ತೋರಿಸಲು ನಕಲಿ ಜನನ ಪ್ರಮಾಣ ಪತ್ರವನ್ನು ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಹೊಸ ದಾಖಲೆ ಹಾಗೂ ಶಾಲಾ ವರ್ಗಾವಣೆ ಪ್ರಮಾಣಪತ್ರಗಳನ್ನು ಹೋಲಿಸಿದ ಅಧಿಕಾರಿಗಳು ಅವು ಸುಳ್ಳು ಎನ್ನುವುದನ್ನು ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News