×
Ad

ಚೋರ್ಲಾ ಘಾಟ್ 400 ಕೋಟಿ ರೂ. ದರೋಡೆ ಪ್ರಕರಣ : ಪ್ರಮುಖ ಆರೋಪಿ ಕಿಶೋರ್‌ ಸಾಳವೆ ಶರಣು; ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

Update: 2026-02-01 19:26 IST

ಸಾಂದರ್ಭಿಕ ಚಿತ್ರ | PC : gemini AI

ಬೆಳಗಾವಿ : ಜಿಲ್ಲೆಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ ಪ್ರಕರಣ ಹಾಗೂ ಈ ಕುರಿತು ಬಹಿರಂಗಪಡಿಸಿದ್ದ ಸಂದೀಪ ಪಾಟೀಲ್‌ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕಿಶೋರ್‌ ಸಾಳವೆ ಶನಿವಾರ ರಾತ್ರಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ. ರವಿವಾರ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ನಗದು ಹೊಂದಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ. ಈ ದರೋಡೆಯ ಹಿಂದೆ ಕಿಶೋರ್‌ ಸಾಳವೆ ಹಾಗೂ ಅವರ ತಂಡವೇ ಇದೆ ಎಂದು ನಾನು ಬಹಿರಂಗಪಡಿಸಿದ್ದಕ್ಕೆ ನನ್ನನ್ನು ಅಪಹರಣ ಮಾಡಲಾಗಿದೆ ಎಂದು ಸಂದೀಪ ಪಾಟೀಲ್‌ ದೂರು ದಾಖಲಿಸಿದ್ದರು. ಆದರೆ ಈವರೆಗೆ ಹಣದ ದರೋಡೆ ಅಥವಾ ವಾಹನ ದರೋಡೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕ ಪ್ರಕರಣ ದಾಖಲಾಗಿಲ್ಲ.

ಅಪಹರಣದಲ್ಲಿ ಬಳಸಲಾಗಿದೆ ಎನ್ನಲಾದ ವಾಹನದ ಚಾಲಕನೂ ಸೇರಿ ಏಳು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಪ್ರಕರಣದ ಮುಖ್ಯ ಆರೋಪಿ ಕಿಶೋರ್‌ ಸಾಳವೆ ತಲೆಮರೆಸಿಕೊಂಡಿದ್ದು, ಬಳಿಕ ಮಹಾರಾಷ್ಟ್ರದ ನಾಸಿಕ್‌ ತಾಲ್ಲೂಕಿನ ಘೋಟಿ ಪೊಲೀಸ್‌ ಠಾಣೆಗೆ ಶರಣಾಗಿದ್ದಾರೆ. ಸದ್ಯ ಅವರನ್ನು ಅಪಹರಣ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News