×
Ad

ಬೆಳೆಗೆ ನೀರು ಒದಗಿಸುವಂತೆ ಆಗ್ರಹಿಸಿ ರೈತರಿಂದ ಕಂಪ್ಲಿ ಬಂದ್‌ : ಉತ್ತಮ ಪ್ರತಿಕ್ರಿಯೆ

Update: 2025-11-03 20:47 IST

ಬಳ್ಳಾರಿ /ಕಂಪ್ಲಿ:  ಬೆಳೆಗೆ ನೀರು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ, ತಾಲೂಕು, ನಗರ ಘಟಕದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.  

ಉದ್ಭವ ಗಣೇಶ ದೇವಸ್ಥಾನದಿಂದ ಬೃಹತ್ ಕಾಲ್ನಡಿಗೆ ಜಾಥಾ ಕೂಡ ನಡೆಯಿತು. ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲ ಹೊತ್ತು  ಸಂಚಾರ ಅಸ್ಥವ್ಯಸ್ಥವಾಗಿತ್ತು.  

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿರೇಶ್‌, ನಗರ ಘಟಕ ಅಧ್ಯಕ್ಷ ತಿಮ್ಮಪ್ಪನಾಯಕ, ರೈತ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಎ.ಸಿ.ದಾನಪ್ಪ, ಕೊಟ್ಟೂರು ರಮೇಶ್‌, ಆನಂದರೆಡ್ಡಿ ಅಳ್ಳಳ್ಳಿ ವಿರೇಶ, ಕಡೆಮನೆ ಪಂಪಾಪತಿ, ಇಟಗಿ ಬಸವರಾಜಗೌಡ, ಬಿ.ನಾರಾಯಣಪ್ಪ, ಎಂ.ಸುಧೀರ್, ಡಿ.ಮುರಾರಿ, ಸಿ.ಡಿ.ಮಹಾದೇವ್‌, ಎನ್.ಗಂಗಣ್ಣ, ಜಡೆಪ್ಪ ಸೇರಿದಂತೆ ಅನೇಕರಿದ್ದರು.

ಡಿವೈಎಸ್‌ಪಿ ಪ್ರಸಾದ್ ಗೋಖುಲೆ, ಪಿಐ ಕೆ.ಬಿ.ವಾಸುಕುಮಾರ್‌ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News