ಜೆಸಿಐ ಕಂಪ್ಲಿ ಸೋನಾ ಘಟಕದ ನೂತನ ಅಧ್ಯಕ್ಷರಾಗಿ ಡಾ.ಭರತ್ ಪದ್ಮಶಾಲಿ ಅವಿರೋಧ ಆಯ್ಕೆ
ಬಳ್ಳಾರಿ : ಕಳೆದ ಹಲವು ದಶಕಗಳಿಂದ ಸಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜಸಿಐ ಭಾರತದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿರುವ ಪ್ರತಿಷ್ಠಿತ ಜೆಸಿಐ ಕಂಪ್ಲಿ ಸೋನಾ ಘಟಕದ ನೂತನ ಅಧ್ಯಕ್ಷರಾಗಿ ಡಾ.ಭರತ್ ಪದ್ಮಶಾಲಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜೆಸಿಐ ಕಂಪ್ಲಿ ಸೋನಾ ಘಟಕದ ಪದಾಧಿಕಾರಿಗಳು, ಜೆಸಿ ಸಂಸ್ಥೆಯ ಹಿರಿಯ ಸದಸ್ಯರ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿ ನೂತ ಅಧ್ಯಕ್ಷರನ್ನಾಗಿ ಡಾ.ಭರತ್ ಪದ್ಮಶಾಲಿಯವರನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಜೆ.ಸಿ.ಡಾ.ಭರತ್ ಪದ್ಮಶಾಲಿ ಮಾತನಾಡಿ, ಶೀಘ್ರದಲ್ಲಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ಸಮಾರಂಭವನ್ನು ಪಟ್ಟಣದಲ್ಲಿ ಏರ್ಪಡಿಸಲಾಗುವುದು ಎಂದು ಹೇಳಿದರು. ಕಂಪ್ಲಿ ಸೋನಾದ ಎಲ್ಲಾ ಪದಾಧಿಕಾರಿಗಳನ್ನು, ಹಿರಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಲಾದ ಸುಹಾಸ್ ಚಿತ್ರಗಾರ, ವಲಯಾಧಿಕಾರಿ ಬಿ.ರಸೂಲ್, ಪ್ರಸಾದ ಗಡಾದ್, ವಾಸೀಂ ಫಯಾಝ್, ಡಿ.ಮಂಜೇಶ್, ಸಂತೋಷ್ ಕೊಟ್ರಪ್ಪ ಸೋಗಿ, ಎಸ್.ಕೆ.ಇಂತಿಯಾಜ್, ಡಿ.ಭರತ್, ಎಸ್.ಎಂ.ಗುರುಪ್ರನ್ನ, ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.