ಬಳ್ಳಾರಿ | ರೈತನ ಜಮೀನಿನಲ್ಲಿ 10ನೇ ಶತಮಾನದ ಹಳೆಯ ಮೂರ್ತಿಗಳು ಪತ್ತೆ
Update: 2025-11-25 18:52 IST
ಸಿರಗುಪ್ಪ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಲ್ಕುಂದಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 10ನೇ ಶತಮಾನದ್ದು ಎನ್ನಲಾದ ಅಪರೂಪದ ಸೂರ್ಯನ ಶಿಲ್ಪ ಸೇರಿದಂತೆ ಕೆಲವು ಪುರಾತನ ಮೂರ್ತಿಗಳು ಪತ್ತೆಯಾಗಿವೆ.
ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಮೂರ್ತಿಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದೆ.
ಸಂಶೋಧನಾ ತಂಡ ಪತ್ತೆ ಹಚ್ಚಿದ ಶಿವನ ಶಿಲ್ಪ ಮತ್ತು ಸೂರ್ಯನ ಶಿಲ್ಪವು 52 ಸೆಂ.ಮೀ. ಅಗಲ, 83 ಸೆಂ.ಮೀ. ಎತ್ತರ ಮತ್ತು 12 ಸೆಂ.ಮೀ. ಪಾದದ ಅಳತೆಯನ್ನು ಹೊಂದಿದೆ. ಸೂರ್ಯದೇವನು ತನ್ನ ಎರಡು ಕೈಗಳಲ್ಲಿ ಕಮಲವನ್ನು ಹಿಡಿದಿದ್ದು, ಶಿಲ್ಪದ ಹಿಂದೆ ವೃತ್ತಾಕಾರದ ಪ್ರಭಾವಳಿ ಇದೆ. ಶಿಲ್ಪದ ಕಾಲುಗಳು ತುಂಡಾಗಿವೆ.
ಸಂಶೋಧನ ತಂಡವು ಮೌನೇಶ್ ಎಂಬವರ ಹೊಲದಲ್ಲಿ ಈ ಮೂರ್ತಿಗಳನ್ನು ಪತ್ತೆ ಮಾಡಿದೆ.