ಕಂಪ್ಲಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಂಪಿಯ ಹೇಮಕೂಟದ ಭುವನೇಶ್ವರಿ ದೇವಸ್ಥಾನದಿಂದ ಬಳ್ಳಾರಿಗೆ ಸಾಗುತ್ತಿದ್ದ ಭುವನೇಶ್ವರಿ ಜ್ಯೋತಿಯನ್ನು ಶನಿವಾರ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ತಾಲೂಕು ಘಟಕದ ವತಿಯಿಂದ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ರಾಜ್ಯ ಉಪಾಧ್ಯಕ್ಷ ಚಾನಾಳ್ ಶೇಖರ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಅಂಗಡಿ ಶಂಕರ ಅವರ ಆದೇಶದ ಮೇರೆಗೆ ಹಮ್ಮಿಕೊಳ್ಳಲಾಗಿದ್ದ ಈ ಜ್ಯೋತಿ ಯಾತ್ರೆಯು, ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಮಾರ್ಗವಾಗಿ ಕಂಪ್ಲಿ ನಗರವನ್ನು ಪ್ರವೇಶಿಸಿತು. ನಗರದ ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ಜ್ಯೋತಿಯ ಭವ್ಯ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್ ತಲುಪಿತು.

ಮೆರವಣಿಗೆಯುದ್ದಕ್ಕೂ ಕರವೇ ಕಾರ್ಯಕರ್ತರು ಕನ್ನಡದ ಹಳದಿ-ಕೆಂಪು ಧ್ವಜ ಹಾಗೂ ಶಾಲುಗಳನ್ನು ಧರಿಸಿ ಜೈ ಭುವನೇಶ್ವರಿ, ಕನ್ನಡ ಮಾತೆ ಭುವನೇಶ್ವರಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಜ್ಯೋತಿಯನ್ನು ಬರಮಾಡಿಕೊಂಡರು. ಅಂಬೇಡ್ಕರ್ ವೃತ್ತದಲ್ಲಿ ಜ್ಯೋತಿಯನ್ನು ಕೈಯಲ್ಲಿ ಹಿಡಿದು ಸಂಘಟನೆಯ ಪದಾಧಿಕಾರಿಗಳು ಹೆಮ್ಮೆಯಿಂದ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕರವೇ ಕಂಪ್ಲಿ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ತಾಲೂಕು ಉಪಾಧ್ಯಕ್ಷರಾದ ವಿಬಿ ನಾಗರಾಜ್, ಅಕ್ಕಿ ಜಿಲಾನ್, ನಗರ ಘಟಕ ಅಧ್ಯಕ್ಷ ಜಂಗ್ ನಾಗರಾಜ್, ಪದಾಧಿಕಾರಿಗಳಾದ ಡಿಸ್ ಪ್ರಸಾದ್, ಶ್ರೀನಿವಾಸ, ಹೂಗಾರ್ ಗಣೇಶ, ಪತ್ರಯ ಸ್ವಾಮಿ, ರಘುನಾಯಕ, ಕಟ್ಟೆ ವಿನಯ, ಎನ್. ರಾಮಚಂದ್ರ ವಿವಿಧ ಘಟಕಗಳ ಮುದ್ದಾಪುರ ಘಟಕದ ಎಲ್ಲಾ ಪದಾಧಿಕಾರಿಗಳು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಕನ್ನಡಾಭಿಮಾನಿಗಳು ಮತ್ತು ಕರವೇ ಕಾರ್ಯಕರ್ತರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor