Bengaluru | ತಂದೆಯಿಂದ ಹಣ ಕೀಳಲು ಮಗನ ಅಪಹರಣದ ನಾಟಕ; ಮಗ ಸೇರಿ ಮೂವರ ಬಂಧನ
ಬೆಂಗಳೂರು : ತಂದೆಯಿಂದ ಹಣ ಕೀಳಲು ಅಪಹರಣದ ನಾಟಕ ಆಡಿದ್ದ ಮಗ ಸೇರಿದಂತೆ ಮೂವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೀಷ್ ಪಾಟೀಲ್ ಎಂಬಾತನೇ ತಂದೆಯಿಂದ ಹಣ ಕೀಳಲು ಅಪಹರಣದ ನಾಟಕ ಆಡಿದ್ದ ಮಗ.
ಆರ್‌ಆರ್ ನಗರ ನಿವಾಸಿ ಮನೀಷ್ ಪಾಟೀಲ್(40) ತನ್ನ ತಂದೆ ಮನೋಹರ್ ಪಾಟೀಲ್ ಗೆ ಗದಗದಲ್ಲಿ ಹಣದ ವ್ಯವಹಾರ ಇದೆ, ನಾನು ಟ್ರೈನ್ ನಲ್ಲಿ ಹೋಗ್ತಿನಿ ಎಂದು ಹೊರಟಿದ್ದ. ಹೀಗೆ ಹೋದ ಮಗನಿಂದ ಮಾರನೇ ದಿನ ಬೆಳಗ್ಗೆ ವಾಟ್ಸಾಪ್ ಕಾಲ್ ಬಂದಿತ್ತು.
ಅದರೆ ಆ ಪೋನ್ ಕಾಲ್ ನಲ್ಲಿ ಅಪರಿಚಿತರು ಮಾತನಾಡಿ ʼನಿಮ್ಮ ಮಗನನ್ನು ಕಿಡ್ನಾಪ್ ಮಾಡಲಾಗಿದೆ , ನಿಮ್ಮ ಮಗ ಬೇಕು ಎಂದಾದರೆ 90 ಲಕ್ಷ ರೂ. ಹಣ ಕೊಡಬೇಕು. ಇಲ್ಲದೆ ಹೋದರೆ ನಿಮ್ಮ ಮಗನನ್ನ ಮುಗಿಸುವುದಾಗಿʼ ಅವರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಇದರಿಂದ ಗಾಬರಿಯಾದ ತಂದೆ ಮನೋಹರ್ ಪಾಟೀಲ್ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ಪೋನ್ ಟ್ರೇಸ್ ಮಾಡಿ ಹಾಸನದ ಬಳಿ ಇವರನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಮನೀಷ್ ಪಾಟೀಲ್, ಅಪಹರಣ ಮಾಡಿದವರ ಜೊತೆ ಇದ್ದ ಈ ವೇಳೆ ಪೊಲೀಸರು ಪ್ರಶ್ನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಮನೀಷ್ ಪಾಟೀಲ್ ತನ್ನ ತಂದೆಯಿಂದ ಹಣ ಸುಲಿಗೆ ಮಾಡುವ ಸಲುವಾಗಿ ತನ್ನ ಸ್ಬೇಹಿತರ ಜೊತೆ ಇಂತಹದೊಂದು ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಮೂವರನ್ನು ಬಂಧಿಸಿರುವ ಆರ್ ಆರ್ ನಗರ ಠಾಣೆ ಪೊಲೀಸರು ತನಿಖೆ ಮುಂದುವೆರಸಿದ್ದಾರೆ.