ಬೆಂಗಳೂರು: ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗೆ ದಾನಿಯ ಹೃದಯವನ್ನು ಸುರಕ್ಷಿತವಾಗಿ ಸಾಗಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಂಗಳವಾರ ನೆರವು ನೀಡಿತು.

ಮಧ್ಯಾಹ್ನ 12:20ಗಂಟೆಗೆ, ಸ್ಪರ್ಶ್ ಆಸ್ಪತ್ರೆಯ ಐವರು ವೈದ್ಯಕೀಯ ಸಿಬ್ಬಂದಿ ಹೃದಯ ಸಾಗಣೆ ಪೆಟ್ಟಿಗೆಯೊಂದಿಗೆ ಗೋರಗುಂಟೆಪಾಳ್ಯ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದರು. ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ತಂಡವು ಮಧ್ಯಾಹ್ನ 12:23ಗಂಟೆಗೆ ರೈಲನ್ನು ಹತ್ತಿತು. ಹೃದಯದ ಸುರಕ್ಷಿತ ಸಾಗಣೆಗೆ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ವೈದ್ಯಕೀಯ ತಂಡದೊಂದಿಗೆ ತೆರಳಿದರು.

ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗಿನ ಪ್ರಯಾಣವು ಮಧ್ಯಾಹ್ನ 13:24 ಗಂಟೆಗೆ (1 ಗಂಟೆ 10 ನಿಮಿಷ ಅವಧಿಯಲ್ಲಿ) ಯಶಸ್ವಿಯಾಗಿ ಪೂರ್ಣಗೊಂಡಿತು. ಬಳಿಕ ಹೃದಯವನ್ನು ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್‍ಗೆ ಕೊಂಡೊಯ್ಯಲಾಯಿತು. ಬಿಎಂಆರ್‍ಸಿಎಲ್ ನೆರವು ನೀಡಿದ ಮಾನವ ಅಂಗಾಂಗ ಸಾಗಣೆಯ ಎಂಟನೇ ಸಂದರ್ಭ ಇದಾಗಿದ್ದು, ಹೃದಯ ಸಾಗಣೆಯ ಐದನೇ ಸಂದರ್ಭವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಳಿಂಗರಾಯ ಕೆಂಭಾವಿ/ವಾರ್ತಾಭಾರತಿ

contributor

ಮಾಳಿಂಗರಾಯ ಕೆಂಭಾವಿ ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಐಚ್ಛಿಕ ಕನ್ನಡ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಹಾಗೂ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದು, ವಾರ್ತಾಭಾರತಿ ಕನ್ನಡ ದೈನಿಕದಲ್ಲಿ 2023ರಿಂದ ಉಪಸಂಪಾದಕ, ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ಸಿನೆಮಾ ವಿಮರ್ಶೆ ಬರೆಯುವುದು ಇವರ ಹವ್ಯಾಸವಾಗಿದೆ.