ಬಿಜೆಪಿಯಿಂದ ಎಸ್‍ಐಆರ್ ಸಂಪರ್ಕ ಅಭಿಯಾನ

Update: 2026-07-22 19:02 IST

ಬೆಂಗಳೂರು : ಬಿಜೆಪಿ ವತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಜು.25, 26ರಂದು ಮಹಾ ಸಂಪರ್ಕ ಅಭಿಯಾನ ನಡೆಸಲಾಗುವುದು ಎಂದು ಎಸ್‍ಐಆರ್ ಮಹಾಭಿಯಾನದ ಸಂಚಾಲಕ ಎಸ್.ದತ್ತಾತ್ರಿ ತಿಳಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಲೋಗೋ ಪೋಸ್ಟರ್ ಬಿಡುಗಡೆ ಮಾಡಿದರು. ಪ್ರತಿಯೊಬ್ಬ ಕಾರ್ಯಕರ್ತ 20ಮನೆಗಳಿಗೆ ತೆರಳುವಂತೆ ಗುರಿ ನೀಡಿದ್ದೇವೆ. ಆ ಮನೆಯವರಿಗೆ ಫಾರ್ಮ್ ಬಗ್ಗೆ ವಿಚಾರಿಸಿ, ಬಳಿಕ ಫಾರ್ಮ್ ತುಂಬಿಸಲು ಬಿಎಲ್‍ಎ-2 ಜೊತೆ ಸಂಪರ್ಕಿಸುವ ಮೂಲಕ ರಾಜ್ಯದ ಎಲ್ಲ ಮನೆಗಳಿಗೆ ನಮ್ಮ ಕಾರ್ಯಕರ್ತರು ಭೇಟಿ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ದಿನಕ್ಕೆ 10 ಮನೆಯಂತೆ ಭೇಟಿ ಮಾಡಿ, ಹತ್ತು ನಿಮಿಷ ಕಾಲ ಕಳೆದು ಕರಡು ಮತದಾರರ ಪಟ್ಟಿ ಬಳಿಕ ಏನು ಎಂಬ ವಿವರ ನೀಡಲು ತಿಳಿಸಿದ್ದೇವೆ. ಚುನಾವಣಾ ಆಯೋಗ ಮುಂದೆ ಕೇಳಬಹುದಾದ ದಾಖಲೆಗಳ ವಿವರವನ್ನೂ ಮತದಾರರಿಗೆ ಕೊಡಲಿದ್ದೇವೆ. ಇದಕ್ಕಾಗಿ ಮ್ಯಾಪಿಂಗ್ ಕಾರ್ಯ ನಡೆದಿದೆ. ಲಭ್ಯ ಮಾಹಿತಿಯನ್ನು ಬಿಎಲ್‍ಎ-2 ಅವರಿಗೆ ನೀಡಲು ಸೂಚಿಸಲಾಗಿದೆ ಎಂದರು.

ಸಮರ್ಪಕ ತರಬೇತಿ: ಪಕ್ಷದ ಎಲ್ಲ ಪ್ರಮುಖರು, ಕಾರ್ಯಕರ್ತರಿಗೆ ಎಸ್‍ಐಆರ್ ಕುರಿತಂತೆ ಆರು ತಿಂಗಳಿನಿಂದ ತರಬೇತಿ ಕೊಡಲಾಗಿದೆ. ಅಲ್ಲದೆ, ಪ್ರತಿ ಕ್ಷೇತ್ರಕ್ಕೆ ಒಬ್ಬರನ್ನು ಪ್ರಭಾರಿಯಾಗಿ ನೇಮಿಸಿ, ಅವರು ಎಸ್‍ಐಆರ್ ಚಟುವಟಿಕೆ ನೋಡಿಕೊಳ್ಳಲು ತಿಳಿಸಿದ್ದೇವೆ. ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವುದೇ ತಲೆಬಿಸಿಯ ಕೆಲಸ. ಅದನ್ನು ಭರ್ತಿ ಮಾಡಿ ಬಿಎಲ್‍ಒಗಳಿಗೆ ಕೊಡಬೇಕಿದೆ. ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವ ವಿಚಾರದಲ್ಲೂ ತರಬೇತಿ ಕೊಟ್ಟಿದ್ದೇವೆ. ಆದರೂ ಇದರ ವಿಚಾರದಲ್ಲಿ ಗೊಂದಲವಿದೆ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News