ಬಸವಕಲ್ಯಾಣ : ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಣೆ
ಕನ್ನೇರಿ ಸ್ವಾಮಿ
ಬೀದರ್ : ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಜೂ.28 ರಂದು ನಡೆಯಲಿರುವ ಬಸವಾದಿ ಶಿವ ಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮಕ್ಕೆ ಬಸವಕಲ್ಯಾಣ ತಾಲೂಕು ಆಡಳಿತ ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದೆ.
ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಜೂ.28 ರಂದು ಬಸವಾದಿ ಶಿವ ಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮ ಮಾಡಲು ಅನುಮತಿ ಕೋರಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಕನ್ನೇರಿ ಸ್ವಾಮಿ ಆಗಮಿಸುವವರಿದ್ದು, ಹಲವು ಬಾರಿ ಕನ್ನೇರಿ ಸ್ವಾಮಿ ಬಸವಣ್ಣನವರ ಅನುಯಾಯಿಗಳ ಬಗ್ಗೆ ಮತ್ತು ಬಸವ ತತ್ವದ ಪ್ರಚಾರ ಮಾಡುತ್ತಿರುವ ಮಠಾಧೀಶರ ಬಗ್ಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಅಥವಾ ಅವಹೇಳನಕಾರಿ ಮಾತನಾಡಿರುತ್ತಾರೆ.
ಈ ಬಗ್ಗೆ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳು ಈ ಕಾರ್ಯಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಆ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ಇರುತ್ತದೆ ಎಂದು ಪೊಲೀಸ್ ಇಲಾಖೆ ವರದಿ ನೀಡಿದೆ. ಹಾಗಾಗಿ ಈ ಕಾರ್ಯಕ್ರಕಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಬಸವಕಲ್ಯಾಣದ ತಹಶೀಲ್ದಾರರು ತಮ್ಮ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.