Bhalki | 10 ತಿಂಗಳ ಸಂಭಾವನೆ ಬಾಕಿ ಆರೋಪ: ಇಸಿಸಿಇ ಶಾಲೆಗಳ ಅತಿಥಿ ಶಿಕ್ಷಕರು, ಆಯಾಗಳಿಂದ ಮನವಿ
ಭಾಲ್ಕಿ: ಕೆಕೆಆರ್ಡಿಬಿ ಅಡಿಯಲ್ಲಿ ಭಾಲ್ಕಿ ತಾಲೂಕಿನ 25 ಇಸಿಸಿಇ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕರು ಹಾಗೂ ಆಯಾಗಳಿಗೆ ಜೂನ್ 2025ರಿಂದ ಮಾರ್ಚ್ 2026ರವರೆಗಿನ 10 ತಿಂಗಳ ಸಂಭಾವನೆ ಪಾವತಿಯಾಗಿಲ್ಲ ಎಂದು ಆರೋಪಿಸಿ, ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ಅತಿಥಿ ಶಿಕ್ಷಕರಿಗೆ ಮಾಸಿಕ 12 ಸಾವಿರ ರೂ. ಹಾಗೂ ಆಯಾಗಳಿಗೆ 6,250 ರೂ. ಸಂಭಾವನೆ ನಿಗದಿಪಡಿಸಲಾಗಿದ್ದರೂ, ಇದುವರೆಗೆ ಹಣ ಪಾವತಿಯಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಏಪ್ರಿಲ್ 13 ಹಾಗೂ ಆಗಸ್ಟ್ 26ರಂದು ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಕೋರಿದ್ದರೂ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಕುಟುಂಬ ನಿರ್ವಹಣೆಗೆ ಈ ಸಂಭಾವನೆಯೇ ಆಧಾರವಾಗಿದ್ದು, ಹಣ ಪಾವತಿಯಾಗದ ಕಾರಣ ತೊಂದರೆಯಾಗಿದೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಸಮಸ್ಯೆಯನ್ನು ಪರಿಗಣಿಸಿ, ಬಾಕಿ ಸಂಭಾವನೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸುವರ್ಣಾ, ಜ್ಯೋತಿ, ಮುತ್ತಮ್ಮಾ, ಉಜ್ವಲಾ, ಸಮೀನಾ, ಗೋದಾವರಿ, ಮಂಜುಳಾ, ಭಾಗ್ಯಶ್ರೀ, ಪೂಜಾ, ಭವಾನಿ, ಜೈಶ್ರೀ, ಸೋನಿ, ಅಂಜಲಿ, ಸಿದ್ದಮ್ಮಾ, ಸ್ವೇತಾ, ರಾಜೇಶ್ವರಿ, ಮೇಘಾಭಾಯಿ, ಸಂಧ್ಯಾ, ಹೀನಾ, ಮಹಾದೇವಿ, ಸುಗಂಧಾ ಹಾಗೂ ಕ್ರಾಂತಿ ಸೇರಿದಂತೆ ಇತರರು ಉಪಸ್ಥಿತರಿದ್ದ