ಭಾಲ್ಕಿ : ಕಾಡು ಹಂದಿ ದಾಳಿ; ಗಾಯಾಳು ಮೃತ್ಯು
ಬೀದರ್ : ಕಾಡು ಹಂದಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ನಡೆದಿದೆ.
ಚನ್ನಬಸಪ್ಪ ಭುರೆ ಮೃತ ವ್ಯಕ್ತಿ.
ಗುರುವಾರ ಬೆಳಿಗ್ಗೆ ಕಾಡು ಹಂದಿ ದಾಳಿಯಿಂದ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಚನ್ನಬಸಪ್ಪ ಭುರೆ ಗಂಭೀರವಾಗಿ ಗಾಯಗೊಂಡು ಬೀದರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇನ್ನೊಬ್ಬ ಮಹಿಳೆ ಸಂಪತಾ ಹೆಡೆ ಅವರ ಮೇಲೂ ಕಾಡು ಹಂದಿ ದಾಳಿ ನಡೆಸಿದೆ. ಇವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.