Bidar | ಜೈಲಿನಿಂದ ಪರಾರಿಯಾದ ಕೈದಿ ಬಗ್ಗೆ ಮಾಹಿತಿ ನೀಡಿದವರಿಗೆ 15 ಸಾವಿರ ರೂ. ಬಹುಮಾನ ಘೋಷಣೆ

Update: 2026-07-22 20:16 IST

ಬೀದರ್ : ಇತ್ತೀಚಿಗೆ ಕಲ್ಬುರ್ಗಿ ಜೈಲಿನಿಂದ ಪರಾರಿಯಾದ ಕೈದಿ ಬಗ್ಗೆ ಮಾಹಿತಿ ನೀಡಿದವರಿಗೆ ಬೀದರ್ ಜಿಲ್ಲಾ ಪೊಲೀಸ್ ರಿಂದ 15 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ್ ಗ್ರಾಮದ ನಿವಾಸಿಯಾದ ಮಸ್ತಾನಪ್ಪ ಅಲಿಯಾಸ್ ಮಾಶಾ (28) ಪರಾರಿಯಾದ ಕೈದಿ.

ಜೈಲಿನಿಂದ ಪರಾರಿಯಾದ ಮಸ್ತಾನಪ್ಪ ಎಂಬ ಕೈದಿ ಬಗ್ಗೆ ಮಾಹಿತಿ ನೀಡಿದವರಿಗೆ ಬೀದರ್ ಜಿಲ್ಲಾ ಪೊಲೀಸರಿಂದ 15 ಸಾವಿರ ರೂ. ಘೋಷಣೆ ಮಾಡಲಾಗಿದೆ. ಮಾಹಿತಿ ನೀಡಿದವರ ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ಭರವಸೆ ನೀಡಲಾಗಿದೆ. ಈತನ ಬಗ್ಗೆ ಮಾಹಿತಿ ಇದ್ದವರು 94808 03400, 94808 03438, 94808 03422 ಹಾಗೂ 94808 03460 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಬಹುದಾಗಿದೆ.

ಘಟನೆ ವಿವರ:

ಕಲಬುರಗಿ ಕೇಂದ್ರ ಕಾರಾಗೃಹದಿಂದ ಜು.14 ರ ನಸುಕಿನ ಜಾವದಲ್ಲಿ ಶಿಕ್ಷಾ ಕೈದಿಗಳಾದ ಸಾಗರ್‌, ಸಂತೋಷ್‌ ಹಾಗೂ ಮಸ್ತಾನ್‌ ಎನ್ನುವ ಮೂವರು ಕೈದಿಗಳು ಪರಾರಿಯಾಗಿದ್ದರು. ಈ ಕುರಿತು ಸಂತೋಷ್‌ ಎಂಬಾತನನ್ನು ಹುಮನಾಬಾದ್ ಸಮೀಪ ಬಂಧಿಸಿದರೆ, ಸಾಗರ್ ಎಂಬಾತನನ್ನು ಭಾಲ್ಕಿಯ ಬಸ್ ನಿಲ್ದಾಣದ ಹತ್ತಿರ ಬಂಧಿಸಲಾಗಿತ್ತು. ಮೂರನೆ ಕೈದಿಯಾದ ಮಸ್ತಾನ್ ನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದು, ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News