ಹುಮನಾಬಾದ್ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಅಪಾರ ಪ್ರೀತಿ ಮತ್ತು ಅಭಿಮಾನದಿಂದ ಹುಮನಾಬಾದ್ ತಾಲೂಕಿನ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ‘ಅನ್ನರಾಮಯ್ಯ’ ಎಂದು ವಿಶಿಷ್ಟ ಹೆಸರಿಡಲು ನಿರ್ಧರಿಸಿದ್ದಾರೆ.

ತಾಲೂಕಿನ ದುಬಲಗುಂಡಿ ಗ್ರಾಮದ ಹಾಲುಮತ ಸಮಾಜದ ಯುವ ಮುಖಂಡ ಹಾಗೂ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಆಪ್ತ ಸಹಾಯಕ ರಾಜು ಪೂಜಾರಿ ಅವರು ತಮ್ಮ ಮಗನಿಗೆ ‘ಅನ್ನರಾಮಯ್ಯ’ ಎಂದು ಹೆಸರಿಟ್ಟಿದ್ದಾರೆ.

ಹೆಸರಿನ ಹಿಂದಿನ ಕಾರಣವನ್ನು ವಿವರಿಸಿದ ರಾಜು ಪೂಜಾರಿ, “ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಅನ್ನಭಾಗ್ಯದ ‘ಅನ್ನ’ ಹಾಗೂ ಅವರ ಹೆಸರಿನಲ್ಲಿರುವ ‘ರಾಮಯ್ಯ’ ಎಂಬುದನ್ನು ಸೇರಿಸಿ ‘ಅನ್ನರಾಮಯ್ಯ’ ಎಂದು ಹೆಸರಿಡುತ್ತಿದ್ದೇನೆ. ಇದು ಬಡವರ ಬಗ್ಗೆ ಸಿದ್ದರಾಮಯ್ಯ ಅವರು ಹೊಂದಿರುವ ವಿಶೇಷ ಕಾಳಜಿಗೆ ನಾನು ಸಲ್ಲಿಸುತ್ತಿರುವ ಗೌರವ” ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿರುವ ರಾಜು ಪೂಜಾರಿ ಅವರ ಈ ನಡೆ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor