ಬೀದರ್‌ : ಎಸ್‌ಐಆರ್‌ ವಿರೋಧಿಸಿ ಚಿಟಗುಪ್ಪಾ ತಾಲೂಕಿನ ಮನ್ನಾಏಖ್ಖೇಳ್ಳಿಯಲ್ಲಿ ಸಿಪಿಐ(ಎಂ) ಪಕ್ಷದಿಂದ ರವಿವಾರ ಪ್ರತಿಭಟನೆ ನಡೆಸಲಾಯಿತು.

ಮನ್ನಾಏಖ್ಖೇಳ್ಳಿಯ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಜ್ಞಾನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರೇಷ್ಮಾ ಹಂಸರಾಜ್‌ ಅವರು ಮಾತನಾಡಿ, ದೇಶದಲ್ಲಿ ಕುತಂತ್ರಗಳು ನಡೆಯುತ್ತಿವೆ. ಮತದಾನದ ಹಕ್ಕನ್ನು ಕದಿಯಲಾಗುತ್ತಿದೆ. ನಮ್ಮ ಮತದಾನದ ಹಕ್ಕನ್ನು ಕದ್ದಿರುವ ಜ್ಞಾನೇಶ್‌ಕುಮಾರ್‌ ಅವರನ್ನು ವಜಾಗೊಳಿಸಬೇಕು. ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಿರುವ ಬಿಜೆಪಿ ಸರಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.  

ಶಶಿಕಾಂತ್‌ ಡಾಂಗೆ ಅವರು ಮಾತನಾಡಿ, ಸರಕಾರಿ ಹುದ್ದೆಯಲ್ಲಿರುವ ಜ್ಞಾನೇಶ್‌ ಕುಮಾರ್‌ ಅವರು ಬಿಜೆಪಿ ಅಜೆಂಡಾ ಹಿಡಿದುಕೊಂಡು ವೋಟ್‌ ಚೋರಿ ಮಾಡಲು ಬರುತ್ತಿದ್ದಾರೆ. ವೋಟ್‌ ನಮ್ಮ ಹಕ್ಕಾಗಿದ್ದು, ಜ್ಞಾನೇಶ್‌ ಕುಮಾರ್‌ ಅವರನ್ನು ಬಂಧಿಸಿ ಜೈಲಿಗಟ್ಟುವ ಕೆಲಸವಾಗಬೇಕಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಗೌಸೋದ್ದಿನ್‌, ಪ್ರಭು ಸಂತೋಷಕರ್‌, ಶ್ರೀಮಂತ್ ಮೈತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor