ಸಾಂದರ್ಭಿಕ ಚಿತ್ರ | Photo credit : PTI

ಬೀದರ್‌ : ಜಿಲ್ಲೆಯಲ್ಲಿ ಒಟ್ಟು 32,666 ಮಂದಿಗೆ ನೋಟಿಸ್ ನೀಡಲಾಗಿದ್ದು, 32,516 ಸೂಚನೆ ವಿತರಿಸಲಾಗಿದೆ. ಹಾಗೆಯೇ 28,476 ನೋಟಿಸ್‌ಗಳ ವಿಚಾರಣೆ ಮುಕ್ತಾಯಗೊಂಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಚುನಾವಣೆ ತಹಶೀಲ್ದಾರರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,093 ನೋಟಿಸ್ ರಚಿಸಿ, 3,097 ಸೂಚನೆ ವಿತರಿಸಲಾಗಿದ್ದು, 2,248 ಜನರ ವಿಚಾರಣೆ ನಡೆದಿದೆ. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ 5,049 ನೋಟಿಸ್ ರಚಿಸಿ, 5049 ಸೂಚನೆ ವಿತರಿಸಲಾಗಿದ್ದು, 5,048 ವಿಚಾರಣೆ ನಡೆದಿದೆ. ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2,459 ನೋಟಿಸ್ ರಚಿಸಿ, 2,459 ಸೂಚನೆ ವಿತರಿಸಲಾಗಿದ್ದು, 2,284 ವಿಚಾರಣೆ ನಡೆದಿದೆ.

ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ 11,262 ನೋಟಿಸ್ ರಚಿಸಿ, 11,204 ಸೂಚನೆ ವಿತರಿಸಲಾಗಿದ್ದು, 9,409 ವಿಚಾರಣೆ ನಡೆದಿದೆ. ಭಾಲ್ಕಿ ವಿಧಾನ ಸಭಾಕ್ಷೇತ್ರದಲ್ಲಿ 5,835 ನೋಟಿಸ್ ರಚಿಸಿ, 5,739 ಸೂಚನೆ ವಿತರಿಸಲಾಗಿದ್ದು, 5,836 ವಿಚಾರಣೆ ನಡೆದಿದೆ. ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ 4,968 ನೋಟಿಸ್ ರಚಿಸಿ, 4,968 ಸೂಚನೆ ವಿತರಿಸಲಾಗಿದ್ದು, 3,651 ವಿಚಾರಣೆ ನಡೆದಿದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 32,666 ನೋಟಿಸ್ ರಚಿಸಿ, 32,516 ಸೂಚನೆ ವಿತರಿಸಲಾಗಿದ್ದು, 28,476 ಮುಕ್ತಾಯಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor