Bidar | ಜೂ.19ರಂದು ವಿದ್ಯುತ್ ವ್ಯತ್ಯಯ
Update: 2026-06-18 15:50 IST
ಬೀದರ್ : ಔರಾದ್ (ಬಿ) ಉಪ-ವಿಭಾಗದ ಔರಾದ್ (ಬಿ) 110 ಕೆ.ವಿ ಉಪ-ಕೇಂದ್ರದಲ್ಲಿ ತುರ್ತು ಹಿನ್ನೆಲೆಯಲ್ಲಿ ಜೂ. 19 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಭಾಲ್ಕಿಯ ವಿದ್ಯುತ್ ಉಪಕೇಂದ್ರ ನೋಡಲ್ ಅಧಿಕಾರಿ 110/33/11 ಕೆ.ವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಂದ್ರಕುಮಾರ್ ಶಿಂಧೆ ಅವರು ತಿಳಿಸಿದ್ದಾರೆ.
11 ಕೆ.ವಿ ಮುಂಗನಾಳ್, ಐ.ಪಿ. 11 ಕೆ.ವಿ ಏಕಂಬಾ ಎನ್.ಜೆ.ವೈ 11 ಕೆ.ವಿ. ಸರಕಾರಿ ಆಸ್ಪತ್ರೆ, 11 ಕೆ.ವಿ. ಎಪಿಎಂಸಿ, 11 ಕೆ.ವಿ. ಬಾದಲಗಾಂವ ಐ.ಪಿ. ಹಾಗೂ 11ಕೆ.ವಿ ಯನಗುಂದಾ ಐ.ಪಿ ಫೀಡರ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.